ಬಾಲಿವುಡ್ ನಟ-ನಟಿಯರು ಪಾರ್ಟಿ, ಪಬ್ ಅಂತ ಓಡೋದು ಕಾಮನ್. ಆದನ್ನು ನಟ, ನಟಿಯರು ಸಾಕಷ್ಟು ಗೌಪ್ಯತೆಯಿಂದಲೇ ಮೇಟೇನ್ ಮಾಡ್ತಾರೆ. ಅದರಲ್ಲೂ ಡ್ರಿಂಕ್ಸ್, ಸ್ಮೋಕ್ ಮಾಡುವಾಗ ಹೆಚ್ಚು ಮುತುವರ್ಜಿ ವಹಿಸ್ತಾರೆ. ಇದೀಗ ನಟ ರಣಬೀರ್ ಜೊತೆ ನಟಿಯೊಬ್ಬರು ಸಿಗರೇಟ್ ಸೇದುತ್ತಿರುವ ಫೋಟೋ ವೈರಲ್ ಆಗಿದೆ.
ಪಾಕ್ ಚೆಲುವೆ ಮಹಿರಾ ಖಾನ್ 2017ರಲ್ಲಿ ಶಾರುಖ್ ಖಾನ್ ನಟನೆಯ ‘ರಯೀಸ್’ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟರು. ಮಹಿರಾ ಖಾನ್ ಸೋಶಿಯಲ್ ಮೀಡಿಯಾದಲ್ಲೂ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿದ್ದು, ಹಲವು ಬಾರಿ ಟ್ರೋಲ್ ಕೂಡ ಆಗಿದ್ದಾರೆ.
ಮಹಿರಾ 2017ರ ರಯೀಸ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಈ ಚಿತ್ರವು 2017 ರಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಚಿತ್ರವಾಗಿತ್ತು. ಈ ಚಿತ್ರದ ಮೂಲಕ ಮಹಿರಾ ಬಾಲಿವುಡ್ ನಲ್ಲೂ ಫೇಮಸ್ ಆದ್ರು. ರಣಬೀರ್ ಕಪೂರ್ ಅವರೊಂದಿಗಿನ ಮಹಿರಾ ಫೋಟೋ ವೈರಲ್ ಆದ ನಂತರ ನಟಿ ಬಗ್ಗೆ ಹಲವು ರೂಮರ್ಸ್ ಕೇಳಿ ಬಂದಿದ್ದು ಇದೀಗ ಮತ್ತೆ ಟ್ರೋಲ್ ಗೆ ಒಳಗಾಗಿದ್ದಾರೆ.
ರಣಬೀರ್ ಜೊತೆ ಪಬ್ಲಿಕ್ ಪ್ಲೇಸ್ ನಲ್ಲಿ ನಟಿ ಮಹಿರಾ ಸಿಗರೇಟ್ ಸೇದುತ್ತಿದ್ರು. ಈ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇಬ್ಬರ ನಡುವೆ ಆಫೇರ್ ಇದೆ ಎನ್ನುವ ಮಾತು ಸಹ ಕೇಳಿ ಬಂದಿತ್ತು. ಇದಾದ ಬಳಿಕ ಮಹಿರಾ ಖಾನ್ ಸಾಕಷ್ಟು ಟ್ರೋಲ್ ಗೆ ಒಳಗಾಗಿದ್ದರು. ಸಿನಿಮಾ ಪ್ರಚಾರಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ. ತುಂಬಾ ನೋವಿನಲ್ಲಿ ಮನೆ ಸೇರಿದ್ದೆ ಎಂದು ನಟಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ರು.
ರಣಬೀರ್ ಜೊತೆಗಿನ ಫೋಟೋದಿಂದ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದೆ. ಫೋಟೋ ವೈರಲ್ ಆದ ಆ ದಿನಗಳಲ್ಲಿ ನಾನು ಖಿನ್ನತೆಗೆ ಒಳಗಾಗಿದ್ದೆ ಎಂದು ಸಂದರ್ಶನದಲ್ಲು ಮಹಿರಾ ಖಾನ್ ಹೇಳಿಕೊಂಡಿದ್ದಾರೆ. ಅದು ನನಗೆ ಕಷ್ಟದ ಸಮಯ. ನನ್ನ ಮೇಲೆ ದಾಳಿ ನಡೆದಿದೆ ಎನ್ನುವಂತೆ ನನಗೆ ಅನಿಸುತ್ತಿತ್ತು ಎಂದಿದ್ದಾರೆ.
ಭಾರತೀಯ ಚಾನೆಲ್ ಗಳಲ್ಲಿ ನನ್ನ ಫೋಟೋಗಳು ಹರಿದಾಡಿತ್ತು, ಕೆಟ್ಟ ಟ್ವೀಟ್ ಗಳು ಮತ್ತು ಕಮೆಂಟ್ ಗಳನ್ನು ನೋಡಿದ ಆ ದಿನಗಳು ತನ್ನ ಮೇಲೆ ವಿಶ್ವಾಸ ಕಳೆದುಕೊಳ್ಳುವಂತೆ ಮಾಡಿತ್ತು. ಆ ದಿನಗಳನ್ನ ಎದುರಿಸೋದು ನನಗೆ ದೊಡ್ಡ ಸವಾಲ್ ಆಗಿತ್ತು ಎಂದು ಮಹಿರಾ ಹೇಳಿಕೊಂಡಿದ್ದಾರೆ.
ಮನೆ ಹಾಗೂ ಮಾಧ್ಯಮಗಳಿಂದ ನಾನು ತುಂಬಾ ಒತ್ತಡಕ್ಕೆ ಒಳಗಾಗಿದ್ದೆ, ಒಂದು ದಿನ ನಾನು ಪ್ಯಾನಿಕ್ ಅಟ್ಯಾಕ್ ಆಗಿ ಮೂರ್ಛೆ ಹೋಗಿದ್ದೆ. ನಾನು ಮೊದಲ ಬಾರಿಗೆ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗುವಂತೆ ಆಯ್ತು. ಆದ್ರೆ ಆ ವೇಳೆ ಯಾರೂ ಸಹಾಯ ಮಾಡಲಿಲ್ಲ, ನಾನು ಅನೇಕ ವೈದ್ಯರ ಬಳಿಗೆ ಹೋಗಿದ್ದೆ. ಆ ವರ್ಷ ತುಂಬಾ ಕಷ್ಟವಾಗಿತ್ತು. ನಿದ್ದೆ ಬರಲಿಲ್ಲ, ಕೈ ನಡುಗುತ್ತಿತ್ತು ಎಂದು ನಟಿ ಮಹಿರಾ ಹೇಳಿಕೊಂಡಿದ್ದಾರೆ.
ರಣಬೀರ್ ಕಪೂರ್ ಜೊತೆಗಿನ ತನ್ನ ಫೋಟೋಗಳು ವೈರಲ್ ಆದಾಗ, ತನ್ನ ವೃತ್ತಿಜೀವನ ಮುಗಿದು ಹೋಯ್ತು ಎಂದು ಕಣ್ಣೀರು ಹಾಕಿದ್ದೆ ಎಂದು ಮಹಿರಾ ಖಾನ್ ಬೇಸರ ವ್ಯಕ್ತಪಡಿಸಿದ್ದಾರೆ.