ಹುಬ್ಬಳ್ಳಿ: ಹಿಂದಿನ ಸರ್ಕಾರದ ಕಾರ್ಯಕ್ರಮಗಳ ಉದ್ಘಾಟನೆ ಮಾಡಿ ಸಿಎಂ ಶೂರತ್ವ ತೋರುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ಕಿಡಿಕಾರಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಆಗಿಲ್ಲ. ನಮ್ಮ ಪಕ್ಷದ ನಾಯಕರು ಮಾಡಿದ ಪ್ರಶ್ನೆಗೆ ರಾಜ್ಯ ಸರ್ಕಾರದ ಮಂತ್ರಿಗಳು ಉತ್ತರ ಸಹ ನೀಡಿಲ್ಲ.
ಇದು ನಾಚಿಕೆಯ ಸಂಗತಿ, ಈ ಸರಕಾರ ನಕ್ಷೆಯಲ್ಲಿ ಉತ್ತರ ಕರ್ನಾಟಕವೇ ಇಲ್ಲ ಎಂಬ ಅನುಮಾನ ಮೂಡಿದೆ.
ಉತ್ತರ ಕರ್ನಾಟಕ ಜನರ ಕಣ್ಣಿಗೆ ಮಣ್ಣುಹಾಕುವ ಕಾರ್ಯ ಪದೇ ಪದೆ ಈ ಸರ್ಕಾರದಲ್ಲಿ ನಡೆಯುತ್ತಿದೆ. ಹುಡುಗಾಟದ ರೀತಿಯಲ್ಲಿ ಅಧಿವೇಶನ ನಡೆದಿದೆ.
ವಿಪರೀತ ಕುತ್ತಿಗೆ ನೋವಿನಿಂದ ಬಳಲುತ್ತಿದ್ದೀರಾ..? ಹಾಗಾದ್ರೆ ಇಲ್ಲಿದೆ ನೋಡಿ ಪರಿಹಾರ!
ನಮ್ಮ ಪಕ್ಷ ನಾಯಕರು ಸಮರ್ಥವಾಗಿ ಸದನವನ್ನು ನಿಭಾಯಿಸಿದ್ದಾರೆ ಆದರೆ ಸರ್ಕಾರ ಸ್ಪಂದನೆ ಮಾಡಿಲ್ಲ. ರಾಜ್ಯ ಸರ್ಕಾರದ ಹಣಕಾಸಿನ ಸ್ಥಿತಿ ಬಹಳಷ್ಟು ಗಂಭೀರವಾಗಿದೆ. ಪಶ್ಚಿಮಘಟದ ನೀರಿಗೂ ಟ್ಯಾಕ್ಸ್ ಹಾಕುವ ಚಿಂತನೆ ನಡೆಸಿದ್ದಾರೆ. ಈ ಸರ್ಕಾರ ದಿವಾಳಿಯಾಗಿದೆ. ಇವರು ನಾಳೆ ಗಾಳಿಗೂ ಟ್ಯಾಕ್ಸ್ ಹಾಕುತ್ತಾರೆ, ಹಿಂದಿನ ಸರ್ಕಾರದ ಕಾರ್ಯಕ್ರಮಗಳ ಉದ್ಘಾಟನೆ ಮಾಡಿ ಸಿಎಂ ಶೂರತ್ವ ತೋರುತ್ತಿದ್ದಾರೆ ಎಂದು ಹೇಳಿದ್ದಾರೆ.