ವಿಜಯಪುರ ನಗರದಲ್ಲಿ ಪರಿಸರ, ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಜಾಗೃತಿಗಾಗಿ ವೃಕ್ಷಥಾನ್ ಹೆರಿಟೇಜ್ ರನ್ ಯಶಸ್ವಿಯಾಗಿ ನಡೆಯಿತು. ಸುಮಾರು 10 ಸಾವಿರ ಜನ ಸ್ಪರ್ದಾಳುಗಳು ವೃಕ್ಷಥಾನ್ ಹೆರಿಟೇಜ್ ರನ್ ನಲ್ಲಿ ಪಾಲ್ಗೊಂಡರು. ಇತ್ತ ಸಚಿವರು, ಶಾಸಕರು, ಸ್ವಾಮಿಜಿಗಳು ಈ ರನ್ ನಲ್ಲಿ ಪಾಲ್ಗೊಂಡು ಪಾಲ್ಗೊಂಡು ಓಟಗಾರರಿಗೆ ಹುರಿದುಂಬಿಸಿದರು. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.
ಹೌದು… ವಿಜಯಪುರ ನಗರದ ಡಾ.ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದ ಎದುರು ಆರಂಭಿಕ 21, 10 ಹಾಗೂ 5 ಕಿಮಿ ಕಿ.ಮೀ. ಮ್ಯಾರಥಾನ್ ಗೆ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಹಸಿರು ನಿಶಾನೆ ತೋರಿದರು. ರಾಜ್ಯದ ವಿವಿಧ ಜಿಲ್ಲೆಗಳ ಸಾವಿರಾರು ಜನ ಓಟಗಾರರು ಮ್ಯಾರಥಾನ್ ನಲ್ಲಿ ಭಾಗವಹಿಸಿದ್ದರು. ಈ ವೇಳೆ ಜನಪದ ಕಲಾ ತಂಡಗಳ ಆಕರ್ಷಕ ನೃತ್ಯ, ವಾದ್ಯ ಮೇಳಗಳ ಸಂಗೀತವು ಮ್ಯಾರಥಾನ್ ಗೆ ಕಳೆಗಟ್ಟಿದವು. ಮ್ಯಾರಥಾನ್ ಸಾಗುವ ಮಾರ್ಗದಲ್ಲಿ ಝಿರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು. ರಸ್ತೆಯ ಇಕ್ಕೆಲಗಳಲ್ಲಿ ಜನರು ಸಾಲಾಗಿ ನಿಂತು,
ಓಟಗಾರರನ್ನು ಹುರಿ ದುಂಬಿಸುತ್ತಿದ್ದದ್ದು ಕಂಡು ಬಂತು. ಈ ಕಾರ್ಯಕ್ರಮ ದಲ್ಲಿ ಒಟ್ಟು 21 ಕಿಲೋ ಮೀಟರ್, 10 ಕಿ.ಮೀ, 5 ಕಿ.ಮೀ, ವಿಭಾಗಗಳಲ್ಲಿ ನಡೆದ ವೃಕ್ಷಥಾನ್ ಹೆರಿಟೇಜ್ ಓಟಗಳು ನಡೆದವು. ಸಾವಿರಾರು ಜನ ಅತ್ಯುತ್ಸಾಹದಿಂದಲೇ ಪಾಲ್ಗೊಂಡಿದ್ದರು. ಇದೇ ವೇಳೆ ವಿಧಾನಸಭಾಧ್ಯಕ್ಷ ಯು.ಟಿ.ಖಾದರ, ಸಚಿವ ಎಂ.ಬಿ.ಪಾಟೀಲ, ಎಮ್ ಎಲ್ಸಿ ಸುನೀಲಗೌಡ ಪಾಟೀಲ, ಶಾಸಲ ವಿಠ್ಠಲ ಕಟಕದೊಂಡ ಸೇರಿದಂತೆ ಹಲವರು ಹೆರಿಟೇಜ್ ರನ್ ನಲ್ಲಿ ಐದು ಕೀಮಿ ಓಡಿ ಓಟಗಾರರಿಗೆ ಹುರಿದುಂಬಿಸಿದರು. ಇದೇ ವೇಳೆ ಸ್ವಾಮೀಜಿಗಳು ಕೂಡಾ ಮ್ಯಾರಾಥಾನ್ ನಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು..
ವಿಪರೀತ ಕುತ್ತಿಗೆ ನೋವಿನಿಂದ ಬಳಲುತ್ತಿದ್ದೀರಾ..? ಹಾಗಾದ್ರೆ ಇಲ್ಲಿದೆ ನೋಡಿ ಪರಿಹಾರ!
ಈ ಹೆರಿಟೇಜ್ ರನ್ ಅನ್ನು ಭಾರೀ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ ಅವರು ವಿಜಯಪುರದ ಹಸಿರೀಕರಣದ ಗುರಿಯೊಂದಿಗೆ ಪ್ರತೀವರ್ಷವೂ ಹೆರಿಟೇಜ್ ರನ್ ಕಾರ್ಯಕ್ರಮ ಆಯೋಜಿಸಿಕೊಂಡು ಬರುತ್ತಿದ್ದಾರೆ. ಈ ಮೂಲಕ ವಿಜಯಪುರಕ್ಕೆ ಒಂದು ಬ್ರ್ಯಾಂಡ್ ಮೌಲ್ಯ ಸೃಷ್ಟಿಸುವುದು ಈ ಕಾರ್ಯಕ್ರಮದ ಆಶಯವಾಗಿದೆ. ವಿಜಯಪುರದ ಪ್ರಾಚೀನ ಸ್ಮಾರಕಗಳು, ದೇವಸ್ಥಾನಗಳ ಸುತ್ತಲೂ ಸುತ್ತು ಹಾಕಿದರು. ಜತೆಗೆ, ನಾನಾ ತಂಡಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದವು. ಈ ವೇಳೆ ಸಚಿವ ಎಂ.ಬಿ.ಪಾಟೀಲ ನಾವು ನಡೆಸುತ್ತಿರುವ ವೃಕ್ಷಥಾನ್ ಎಲ್ಲರ ಬೆಂಬಲದಿಂದ ವರ್ಷದಿಂದ ವರ್ಷಕ್ಕೆ ಹೆಚ್ಚಿನ ಯಶಸ್ಸು ಕಾಣುತ್ತಿದೆ.
ಮುಂದಿನ ವರ್ಷದಿಂದ ಮತ್ತಷ್ಟು ಹಸಿರೀಕರಣ, ಸ್ಮಾರಕಗಳ ರಕ್ಷಣೆಗೆ ಯೋಜನೆ ರೂಪಿಸೋಣ ಎಂದು ಕರೆ ನೀಡಿದರು. 10. ಸಾವಿರ ಸ್ಪರ್ದಾಳುಗಳು ಈ ಹೆರಿಟೇಜ್ ರನ್ ನಲ್ಲಿ ಪಾಲ್ಗೊಂಡಿದ್ದರು. ಇನ್ನೂ ಓಟಗಾರರು ಓಡುವ ಮಾರ್ಗ ಮದ್ಯೆ ಭಾರಿ ಬಿಗಿಪೋಲಿಸ್ ಬಂದೋ ಬಸ್ತ ನಿಯೋಜನೆ ಮಾಡಲಾಗಿತ್ತು. ಇತ್ತ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆದ ಸಂಸ್ಕೃತಿಕ ಕಾರ್ಯಕ್ರಮದ ವೇಳೆ ಹೆರಿಟೇಜ್ ರನ್ ನಲ್ಲಿ ಪಾಲ್ಗೊಂಡಿದ್ದ ಕ್ರೀಡಾಪಟುಗಳು ಡಿಜೆ ಹಾಡಿಗೆ ಕುಣಿದು ಕುಪ್ಪಳಿಸಿದರು. ಇದೇ ವೇಳೆ ವಿವಿಧ ವಿಭಾಗದಲ್ಲಿ ಪ್ರಶಸ್ತಿ ಪಡೆದ ಸ್ಪರ್ದಾಳುಗಳಿಗೆ ಸಭಾಧ್ಯಕ್ಷರಾದ ಯು ಟಿ ಖಾದರ ಪ್ರಶಸ್ತಿ ಪ್ರಧಾನ ಮಾಡಿದರು..
ಒಟ್ಟಿನಲ್ಲಿ ಕಳೆದ ಹಲವು ತಿಂಗಳಿನಿಂದ ಜನತೆಗೆ ಕಾತರದಿಂದ ಕಾಯುತ್ತಿದ್ದ ಹೆರಿಟೇಜ್ ರನ್ ಯಶಸ್ವಿಯಾಗಿ ಮುಕ್ತಾಯಗೊಂಡಿತು. ವಿಜಯಪುರ ಜಿಲ್ಲೆಯ ಜನತೆ ಹೆರಿಟೇಜ್ ರನ್ ನ ಜಾಗೃತಿಗೆ ನಮ್ಮ ಪ್ರೋತ್ಸಾಹ ಬೆಂಬಲ ಇದೆ ಎಂದು ಈ ರನ್ ನಲ್ಲಿ ಪಾಲ್ಗೊಂಡು ಸಾಬೀತುಪಡಿಸಿದರು. ಹೆರಿಟೇಜ್ ರನ್ ಮೂಲಕ ಜನರಿಗೆ ಪರಿಸರದ ಕುರಿತು ಜಾಗೃತಿ ಮೂಡಿಸಲಾಗಿದ್ದು ನಿಜಕ್ಕೂ ಶ್ಲಾಘನೀಯವೇ ಸರಿ.