ಭಾರತ ತಂಡದಲ್ಲಿ ಆಡಿದ್ದ ಕ್ರಿಕೆಟಿಗ ಪೃಥ್ವಿ ಶಾ ಅವರು ಐಪಿಎಲ್ 2025 ಮೆಗಾ ಹರಾಜಿನಲ್ಲಿ ಅನ್ಸೋಲ್ಡ್ ಆಗಿದ್ದಾರೆ. ಇದು ನಿರೀಕ್ಷೆಯೂ ಆಗಿತ್ತು. ಏಕೆಂದರೆ ಪೃಥ್ವಿ ವರ್ತನೆ ಯಾರಿಗೂ ಇಷ್ಟವಾಗುತ್ತಿಲ್ಲ. ಇನ್ನು ಬಂಡವಾಳ ಹೂಡುವ ಐಪಿಎಲ್ ತಂಡಗಳು ಇಷ್ಟಪಡುತ್ತವೆಯೇ? ಕೋಚ್ಗಳ ಮೇಲೆ ರೇಗಾಡುವ ಪೃಥ್ವಿ, ಪ್ರಸ್ತುತ ತೀವ್ರ ವೈಫಲ್ಯ ಅನುಭವಿಸುತ್ತಿದ್ದಾರೆ.
ಪೃಥ್ವಿ ಶಾ ಪ್ರಸ್ತುತ ಗಮನ ಸೆಳೆಯುವಂತಹ ಪ್ರದರ್ಶನ ನೀಡುತ್ತಿಲ್ಲ. ರಣಜಿ ಟ್ರೋಫಿಯಲ್ಲಿ ಅವರಿಗೆ ಅವಕಾಶ ಸಿಕ್ಕಿತು. ಕೆಟ್ಟ ಪ್ರದರ್ಶನ ನೀಡಿದ್ದರು. ಜವಾಬ್ದಾರಿಯ ಕೊರತೆ ಕಾರಣ ಮತ್ತು ಫಿಟ್ನೆಸ್ ಕಡೆ ಗಮನ ಹರಿಸುವಂತೆ ಸೂಚಿಸಿ ಪೃಥ್ವಿಯನ್ನು ಮುಂಬೈ ತಂಡದಿಂದ ಕೈಬಿಡಲಾಯಿತು.
Cholesterol: ಒಂದೇ ತಿಂಗಳಲ್ಲಿ ಕೊಲೆಸ್ಟ್ರಾಲ್ ಕಡಿಮೆ ಆಗಬೇಕೇ.? ಬೆಳಗ್ಗೆ ಈ ಪಾನಿಯ ಕುಡಿಯಿರಿ
ತ್ತೀಚೆಗೆ ಪ್ರಕಟಿಸಲಾದ 16 ಸದಸ್ಯರ ಮುಂಬೈ ತಂಡದಲ್ಲಿ ಪೃಥ್ವಿಗೆ ಚಾನ್ಸ್ ನೀಡಲಾಗಿಲ್ಲ. ಇದರ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಯುವ ದಾಂಡಿಗ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದರು. ಪೃಥ್ವಿ ಶಾ ಅವರ ಸೋಷಿಯಲ್ ಮೀಡಿಯಾ ಪೋಸ್ಟ್ಗೆ ಮುಂಬೈ ಕ್ರಿಕೆಟ್ ಅಸೋಸಿಯೇಷನ್ ತಿರುಗೇಟು ನೀಡಿದೆ. ಅಲ್ಲದೆ ಯುವ ಬ್ಯಾಟರ್ನನ್ನು ಕೈ ಬಿಡಲು ಮುಖ್ಯ ಕಾರಣವೇನು ಎಂಬುದನ್ನು ಸಹ ಬಹಿರಂಗಪಡಿಸಿದ್ದಾರೆ.
ಇತ್ತೀಚೆಗೆ ಮುಕ್ತಾಯಗೊಂಡ ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಪೃಥ್ವಿ ಶಾ ಮುಂಬೈ ತಂಡದ ಭಾಗವಾಗಿದ್ದರು. ಆದರೆ ಅವರ ಕಡೆಯಿಂದ ನಿರೀಕ್ಷಿತ ಪ್ರದರ್ಶನ ಮೂಡಿಬರುತ್ತಿಲ್ಲ. ಇದಕ್ಕೆ ಒಂದು ಕಾರಣ ಯುವ ಆಟಗಾರನ ಲೇಟ್ ನೈಟ್ ಮೋಜು ಮಸ್ತಿ ಎಂದು ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಬಹಿರಂಗಪಡಿಸಿದೆ.
ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿ ವೇಳೆ ಪೃಥ್ವಿ ಶಾ ನಿರಂತರವಾಗಿ ಅಭ್ಯಾಸಕ್ಕೆ ಗೈರಾಗುತ್ತಿದ್ದ. ರಾತ್ರಿಯೆಲ್ಲಾ ಪಾರ್ಟ್ ಮಾಡಿ, ಬೆಳಿಗ್ಗೆ 6 ಗಂಟೆಗೆ ಅವರು ರೂಮ್ಗೆ ಬರುತ್ತಿದ್ದ. ಅವನನ್ನು ನಾವು ಮಗು ತರ ಮುದ್ದು ಮಾಡೋಕೆ ಸಾಧ್ಯವಿಲ್ಲ. ಆತನ ಅಶಿಸ್ತೇ ಆತನ ದೊಡ್ಡ ಶತ್ರುವಾಗಿ ಪರಿಣಮಿಸಿದೆ. ಹೀಗಾಗಿಯೇ ಈ ಬಾರಿ ವಿಜಯ ಹಝಾರೆ ಟೂರ್ನಿಯಿಂದ ಪೃಥ್ವಿ ಶಾ ಅವರನ್ನು ಕೈ ಬಿಡಲು ನಿರ್ಧರಿಸಿದೆವು ಎಂದು ಮುಂಬೈ ಕ್ರಿಕೆಟ್ ಅಸೋಸಿಯೇಷನ್ನ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ.
ಇದರೊಂದಿಗೆ ತಂಡದಲ್ಲಿದ್ದಾಗಲೂ ಪೃಥ್ವಿ ಶಾ ನಿಯಮಗಳನ್ನು ಪಾಲಿಸದೇ ಮೋಜು ಮಸ್ತಿಯಲ್ಲಿ ತೊಡಗಿಸಿಕೊಳ್ಳುತ್ತಿರುವ ವಿಚಾರಗಳು ಬಹಿರಂಗವಾಗಿದೆ. ಈ ಅಶಿಸ್ತಿನ ಬಗ್ಗೆ ಹಲವರು ಎಚ್ಚರಿಸಿದರೂ ಯುವ ಆಟಗಾರ ಕ್ಯಾರೆ ಎನ್ನುತ್ತಿಲ್ಲ. ಹೀಗಾಗಿಯೇ ಇದೀಗ ದೇಶೀಯ ಟೂರ್ನಿಯಿಂದ ಪೃಥ್ವಿ ಶಾ ಅವರನ್ನು ಕೈ ಬಿಡಲಾಗಿದೆ.