ತಮಿಳುನಾಡು: ದೇವಸ್ಥಾನಕ್ಕೆ ಹೋದಾಗ ಅಲ್ಲಿ ಹಲವಾರು ಕಾಣಿಕೆ ಹುಂಡಿಗಳು ಕಾಣಸಿಗುತ್ತದೆ. ಅಲ್ಲಿಗೆ ಬರುವ ಭಕ್ತರು ಹಣವನ್ನು ತಲೆಗೆ ಮೂರು ಸುತ್ತು ತಿರುಗಿಸಿ ಬಳಿಕ ಹುಂಡಿಗೆ ಹಾಕುತ್ತಾರೆ. ಆದ್ರೆ ಇಲ್ಲೊಂದು ಘಟನೆ ಟಚ್ಚರಿ ಮೂಡಿಸಿದೆ. ಹೌದು ಇಲ್ಲೊಬ್ಬ ಭಕ್ತನ ಐಪೋನ್ ಆಕಸ್ಮಿಕವಾಗಿ ಹುಂಡಿಗೆ ಬಿದ್ದಿರುವ ಘಟನೆ ಚೆನ್ನೈ ಬಳಿಯ ತಿರುಪ್ಪೂರ್ನಲ್ಲಿರುವ ಅರುಲ್ಮಿಗು ಕಂದಸ್ವಾಮಿದೇವಾಲಯದಲ್ಲಿ ನಡೆದಿದೆ.
ದೇವಸ್ಥಾನಕ್ಕೆ ಬಂದ ಭಕ್ತರೊಬ್ಬರು ಅಚಾತುರ್ಯದಿಂದ ಹುಂಡಿಗೆ ಮೊಬೈಲ್ ಹಾಕಿದ್ದಾರೆ. ಸಿನಿಮಾದಂತೆ ಇಲ್ಲಿನ ದೇವಸ್ಥಾನದ ಆಡಳಿತಮಂಡಳಿ ಕೂಡ ಫೋನ್ ವಾಪಸ್ ನೀಡದೆ, ಅದನ್ನು ದೇವಸ್ಥಾನದ ಆಸ್ತಿ ಎಂದು ಪರಿಗಣಿಸಿದೆ.
Cholesterol: ಒಂದೇ ತಿಂಗಳಲ್ಲಿ ಕೊಲೆಸ್ಟ್ರಾಲ್ ಕಡಿಮೆ ಆಗಬೇಕೇ.? ಬೆಳಗ್ಗೆ ಈ ಪಾನಿಯ ಕುಡಿಯಿರಿ
ಹುಂಡಿಯಲ್ಲಿ ಬಿದ್ದ ಐಫೋನ್ ದೇವರಿಗೆ ಸೇರಿದ್ದು ಎಂದು ದೇವಸ್ಥಾನದ ಅಧಿಕಾರಿಗಳು ಹೇಳಿದ್ದಾರೆ. ಇದ್ರಿಂದ ಭಕ್ತ ವಿನಯಗಾಪುರದ ದಿನೇಶ್ ಐಫೋನ ನ್ನು ದೇವರಿಗೆ ನೀಡಿ, ಬರಿಗೈನಲ್ಲಿ ಮನೆಗೆ ವಾಪಸ್ ಆಗಿದ್ದಾರೆ. ಆಡಳಿತ ಮಂಡಳಿ ಫೋನನ್ನು ದೇವಸ್ಥಾನದ ಆಸ್ತಿ ಎಂದು ಪರಿಗಣಿಸಿದೆ, ಆದ್ರೆ ಸಿಮ್ ಕಾರ್ಡ್ ಮತ್ತು ಡೇಟಾವನ್ನು ಇನ್ನೊಂದು ಮೊಬೈಲ್ಗೆ ಹಸ್ತಾಂತರಿಸಿಕೊಳ್ಳಲು ಅನುಮತಿ ನೀಡಿದೆ.