ಕೊಡಗು:- ಸುವರ್ಣಸೌಧದಲ್ಲಿ ಜಟಾಪಟಿ ವಿಚಾರವಾಗಿ ಎಎಪಿ ಮುಖಂಡ ಮುಖ್ಯಮಂತ್ರಿ ಚಂದ್ರು ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಬಿಜೆಪಿ ಮುಖಂಡ ಸಿಟಿ ರವಿ ಕೇಸ್ CBI ಗೆ ವಹಿಸಬೇಕು! ಆರ್ ಅಶೋಕ್ ಆಗ್ರಹ!
ಈ ಸಂಬಂಧ ಮಾತನಾಡಿದ ಅವರು, ಅಸಂವಿಧಾನಿಕ ಪದ ಬಳಕೆ ಅಕ್ಷಮ್ಯ ಅಪರಾಧ. ತಪ್ಪು ಮಾಡಿದವರಿಗೆ ಕಠಿಣ ಶಿಕ್ಷೆ ಆಗಬೇಕು. ಇನ್ನೂ ನಂತರದ ಬೆಳವಣಿಗೆ ಹಾಸ್ಯಾಸ್ಪದವಾಗಿತ್ತು. ಅವರು ತಪ್ಪು ಮಾಡಿರೋದು ನಿಜ ಹೀಗಾಗಿ ತುರ್ತಾಗಿ ಬಂಧನ ಮಾಡಬೇಕು. ಈ ತರ ಘಟನೆ ನಡೆಯಬಾರದಂತೆ ಕ್ರಮ ವಹಿಸಬೇಕು.
ಘಟನೆ ಆಗಿರೋದು ಸತ್ಯ. ಅದನ್ನು ಮುಚ್ಚಿಹಾಕುವ ಪ್ರಯತ್ನ ಆಗುತ್ತಿದೆ. ಇಂತಹ ಪ್ರಕರಣ ಮುಂದೆ ನಡೆಯಬಾರದು. ತನಿಖೆಯಿಂದ ಎಲ್ಲಾ ವಿಚಾರ ಬೆಳಕಿಗೆ ಬರಬೇಕು ಎಂದರು.