ಬೆಂಗಳೂರು:- ಬಿಜೆಪಿ ಮುಖಂಡ ಸಿಟಿ ರವಿ ಕೇಸ್ CBI ಗೆ ವಹಿಸಬೇಕು ಎಂದು ವಿಪಕ್ಷ ನಾಯಕ ಆರ್ ಅಶೋಕ್ ಆಗ್ರಹ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ವಿರುದ್ಧ ಪೊಲೀಸರು ನಡೆದುಕೊಂಡ ವರ್ತನೆ ಪ್ರಕರಣವನ್ನ ಸಿಬಿಐ ತನಿಖೆ ನಡೆಸಬೇಕು ಎಂದರು.
ಸಿಟಿ ರವಿ ಕೇಸ್ನಲ್ಲಿ ಆಂಧ್ರ ಸಿನಿಮಾ ರಕ್ತ ಚರಿತ್ರೆ ಮಾಡೆಲ್ನಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಮಾಡಿದೆ. ವಿರೋಧ ಪಕ್ಷವನ್ನ ಟಾರ್ಗೆಟ್ ಮಾಡೋ ಕೆಲಸ ಶುರುವಾಗಿದೆ. ಆಂಧ್ರ ರಾಜಕೀಯ ಮಾದರಿಯಲ್ಲಿ ನಮ್ಮ ರಾಜ್ಯದಲ್ಲೂ ಆಗೋ ಸ್ಥಿತಿ ನಿರ್ಮಾಣ ಆಗಿದೆ ಎಂದು ತಿಳಿಸಿದರು
ಔಟ್ ಗೋಯಿಂಗ್ ಸಿಎಂ ಅವರು ನಮಗೇನು ಆಗಬೇಕು ಅಂತ ಸುಮ್ಮನೆ ಇದ್ದಾರೆ. ಡಿ.ಕೆ.ಶಿವಕುಮಾರ್ ವಿಪಕ್ಷಗಳನ್ನ ಬಡಿದು ಸಿಎಂ ಆಗೋಣ, ಹೈಕಮಾಂಡ್ ಮುಂದೆ ಶಕ್ತಿ ತೋರಿಸೋಕೆ ಹೀಗೆಲ್ಲ ಮಾಡ್ತಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.