ಶಿವಮೊಗ್ಗ:- ಟಿವಿ ರಿಮೋರ್ಟ್ ವಿಚಾರಕ್ಕೆ ಕಿರಿಕ್ ನಡೆದು ಅಜ್ಜಿ ಬೈಗುಳ ತಾಳಲಾರದೆ 16 ವರ್ಷದ ಬಾಲಕಿ ಸೂಸೈಡ್ ಮಾಡಿಕೊಂಡ ಘಟನೆ ಶಿವಮೊಗ್ಗ ನಗರದ ಸೂಳೆಬೈಲಿನಲ್ಲಿ ಜರುಗಿದೆ
ವಿದ್ಯಾರ್ಥಿಗಳ ಜೊತೆ ಅಸಭ್ಯ ವರ್ತನೆ: ಆಡಳಿತಾಧಿಕಾರಿ ವಿರುದ್ಧ ಸಚಿವರಿಗೆ ದೂರು!
16 ವರ್ಷದ ಸಹನಾ ಮೃತ ಬಾಲಕಿ ಎಂದು ಗುರುತಿಸಲಾಗಿದೆ. ಮೊದಲು ಟಿವಿ ರಿಮೋರ್ಟ್ಗಾಗಿ ಇಬ್ಬರು ಮಕ್ಕಳಿಂದ ಗಲಾಟೆ ಶುರುವಾಗಿದೆ. ಇದರಿಂದ ಅಜ್ಜಿ ಬಂದು ಮೊಮ್ಮಗಳಿಗೆ ಬೈದಿದ್ದಾರೆ. ಇದರಿಂದ ಮನನೊಂದ ಮೊಮ್ಮಗಳು ಸಹನಾ ಇಲಿ ಪಾಷಾಣ ಸೇವಿಸಿ ಪ್ರಾಣ ಬಿಟ್ಟಿದ್ದಾಳೆ.
ಘಟನೆ ಸಂಬಂಧ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರಿಂದ ತನಿಖೆ ಮುಂದುವರಿದಿದೆ.