ಹುಬ್ಬಳ್ಳಿ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಕೈಯಲ್ಲಿ ಏನು ಆಗಲ್ಲ ಇದೊಂದು ಷ್ಯಂಡ ಸರ್ಕಾರ ಎಂದು ಮಾಜಿ ಸಿಎಂ ಹಾಗೂ ಸಂಸದ ಜಗದೀಶ್ ಶೆಟ್ಟರ್ ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಷಂಡ ಸರ್ಕಾರ. ಈ ಸರ್ಕಾರದ ಕೈಯಲ್ಲಿ ಏನೂ ಆಗಲ್ಲ. ರಾಜ್ಯದಲ್ಲಿರೋದು ಷಂಡ ಸರ್ಕಾರ. ಇದೊಂದು ಅಸಂಸ್ಕೃತಿ ಪದ ಅಂತಾ ನನ್ನ ಮೇಲೆ ಕೇಸ್ ಹಾಕಿದ್ರೂ ಪರವಾಗಿಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿದೆ ಎಂದರು.
Long Pepper: ಹಿಪ್ಪಲಿಯ ಔಷಧೀಯ ಗುಣಗಳ ಬಗ್ಗೆ ನಿಮಗೆ ಗೊತ್ತಾದ್ರೆ ಶಾಕ್ ಆಗೋದು ಗ್ಯಾರಂಟಿ.!?
ರಾಜ್ಯದಲ್ಲಿ ಮಹಿಳೆಯರಿಗಾಗಲಿ ಯಾರಿಗೂ ರಕ್ಷಣೆ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಗೃಹಮಂತ್ರಿಗಳು ಅವರದ್ದೇ ಆದ ಹೇಳಿಕೆ ಕೊಡುತ್ತಾ ಹೊರಟಿದ್ದಾರೆ. ಸರ್ಕಾರದ ಆಡಳಿತ ವ್ಯವಸ್ಥೆ ಕುಸಿದು ಹೋಗಿದೆ. ತನ್ನ ಹಗರಣಗಳನ್ನ ಮುಚ್ಚಿ ಹಾಕೋಕೆ ಕಾಂಗ್ರೆಸ್ ಸರ್ಕಾರ ವಿಷಯಾಂತರ ಮಾಡುತ್ತಿದೆ ಎಂದು ಅವರು ಹೇಳಿದರು.
ಸಿಎಂ ಐದು ವರ್ಷ ಆಡಳಿತ ಹೇಗೆ ಮಾಡಬೇಕು ಅನ್ನೋ ಪ್ರಯತ್ನದಲ್ಲಿದ್ದಾರೆ. ಆದ್ರೆ ಡಿಕೆಶಿ ಅದನ್ನ ಹೇಗೆ ನಿಲ್ಲಿಸಬೇಕು ಅನ್ನೋ ಪ್ರಯತ್ನದಲ್ಲಿದ್ದಾರೆ. ಕಂದಾಯ ಇಲಾಖೆಯಲ್ಲಿ ಯಾವುದೇ ನೋಂದಣಿ ಕಾರ್ಯ ನಡೆಯುತ್ತಿಲ್ಲ. ಕಂದಾಯ ಇಲಾಖೆಯಲ್ಲಿ ಈ ಸ್ವತ್ತು ಸಮಸ್ಯೆ ಮುಂದುವರೆದಿದೆ. ಯಾವುದೇ ಇಲಾಖೆಗಳಲ್ಲಿ ಸಾರ್ವಜನಿಕರಿಗೆ ಕೆಲಸಗಳಾಗುತ್ತಿಲ್ಲ. ಇಂತಹ ವಿಚಾರಗಳಲ್ಲಿಯೇ ಸರ್ಕಾರ ಕಾಲಹರಣ ಮಾಡ್ತಿದೆ ಎಂದು ಹುಬ್ಬಳ್ಳಿಯಲ್ಲಿ ಜಗದೀಶ್ ಶೆಟ್ಟರ್ ಹೇಳಿಕೆ ನೀಡಿದರು.