ಬೆಳಗಾವಿ:- ಸಿಟಿ ರವಿ ತಲೆಗೆ ಪೆಟ್ಟು ಬಿದ್ದಿರುವುದರ ಹಿಂದೆ ಸರ್ಕಾರದ ಕುಮ್ಮಕ್ಕು ಎಂದು ಬಿವೈ ವಿಜಯೇಂದ್ರ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಸಿಟಿ ರವಿ ಬಂಧಿಸಿ ಇಡೀ ರಾತ್ರಿ ಸುತ್ತಾಡಿಸಿದ್ದಾರೆ. ಒಟ್ಟಾರೆ ಪ್ರಕರಣದಲ್ಲಿ ಸಿಟಿ ರವಿ ಹೇಳಿದ್ದು ಒಂದು ಭಾಗ. ಅದರ ಬಗ್ಗೆ ಸಭಾಪತಿ ಹೇಳಿಕೆ ಗಮನಿಸಬೇಕಾಗುತ್ತದೆ.
ಸುವರ್ಣ ಸೌಧಕ್ಕೆ ನುಗ್ಗಿ ಗೂಂಡಾ ವರ್ತನೆ ತೋರಿದ್ದಾರೆ. ಬಳಿಕ ಸಿಟಿ ರವಿ ಅವರನ್ನು ಹೊತ್ತಾಕ್ಕೊಂಡು ಹೋಗಿ. ಅವರು ಸಾಮಾನ್ಯ ವ್ಯಕ್ತಿ ಅಲ್ಲ ವಿಧಾನ ಪರಿಷತ್ ಸದಸ್ಯ ಮಾಜಿ ಸಚಿವ. ಪೊಲೀಸ್ ಠಾಣೆಗೆ ಹೊತ್ತಕೊಂಡು ಹೋಗಿ ರಾತ್ರಿಯಲ್ಲ ಖಾನಾಪುರ, ರಾಮದುರ್ಗ ಅಲೆದಾಡಿಸಿದ್ದಾರೆ.
ಒಂದು ರೀತಿಯಲ್ಲಿ ಟೆರರಿಸ್ಟ್ ಹೊತ್ತಾಕೊಂಡು ಹೋಗಿದ್ದಾರೆ ಎನ್ನುವ ಭಾವನೆ. ಸರಕಾರದ ಕುಮ್ಮಕ್ಕಿನಿಂದ ಆ ರೀತಿ ವರ್ತನೆ ನಡೆದಿದೆ ಇದು ಖಂಡನಾರ್ಹ. ಸುಮಾರು 500 ಕಿಮೀ. ಜೀಪ್ ಅಲ್ಲಿ ಎತ್ತಾಕೊಂಡ ಹೋಗಿ ಸುತ್ತು ಹೊಡಿಸಿದ್ದಾರೆ. ಏನು ಮಾಡೋದಕ್ಕೆ ಹೊರಟಿದ್ದಾರೆ ಇವರು. ಒಬ್ಬ ಪ್ರತಿನಿಧಿಯನ್ನು ನಡೆಸುಕ್ಕೊಳ್ಳುವ ರೀತಿನಾ ಇದು? ಪೊಲೀಸರ ಮೇಲೆ ದಬ್ಬಾಳಿಕೆ, ಒತ್ತಾಯ ಮಾಡಿ ದೌರ್ಜನ್ಯ ನಡಿತಾಯಿದೆ. ಬಿಜೆಪಿ ಇದನ್ನು ತೀವ್ರವಾಗಿ ಖಂಡಿಸುತ್ತದೆ.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಜಿಲ್ಲಾ ಕೇಂದ್ರಗಳಲ್ಲೂ ಪ್ರತಿಭಟನೆ ಆಯೋಜನೆ ಮಾಡಿದ್ದೇವೆ. ಹಿಂದೆಂದೂ ಕೂಡ ರಾಜ್ಯದಲ್ಲಿ ಇಂತಹ ಘಟನೆ ನಡೆದಿಲ್ಲ. ಇಡೀ ದೇಶದಲ್ಲಿ ಕೂಡ ಈ ರೀತಿ ಆಗಿರಲು ಸಾಧ್ಯವಿಲ್ಲ. ನಾಲ್ಕೈದು ಪೊಲೀಸ್ ಸ್ಟೇಷನ್ ಕರೆದುಕೊಂಡು ಹೋಗಿ ಅಲ್ಲಿ ಕೂರಿಸಿ. ವಿರೋಧ ಪಕ್ಷದ ನಾಯಕರನ್ನು ಒಳಗೆ ಬಿಟ್ಟಿಲ್ಲ. ವಕೀಲರನ್ನು ಒಳಗೆ ಬಿಟ್ಟಿಲ್ಲ. ಸಿಟಿ ರವಿ ಕಂಪ್ಲೇಟ್ ಕೂಡ ರೆಸಿಸ್ಟರ್ ಮಾಡಿಕೊಂಡಿಲ್ಲ. ಇಡೀ ರಾತ್ರಿ ಕಾರ್ಯಕರ್ತರು ಪೊಲೀಸ್ ಠಾಣೆ ಮುಂದೆ ಕುಳಿತು ಪ್ರತಿಭಟನೆ ಮಾಡಿದ್ದಾರೆ. ಸಿಟಿ ರವಿ ತಲೆಗೆ ಪೆಟ್ಟು ಬಿದ್ದಿದೆ ಆಸ್ಪತ್ರೆಗೂ ಕೂಡ ಕರೆದುಕೊಂಡು ಹೋಗಿಲ್ಲ. ಅತಿರೇಕದ ವರ್ತನೆ ಸರ್ಕಾರದ ಕುಮ್ಮಕ್ಕಿನಿಂದ ನಡೆದಿದೆ. ಮೇಜಿಸ್ಟರೇಟ್ ಕರೆದುಕೊಂಡು ಹೋಗ್ತಾರೆ ಎಂದು ಮಾಹಿತಿ ಇದೆ.
ನಾನು ಅಲ್ಲಿಗೆ ಹೋಗುತ್ತಿದ್ದೇನೆ ಎಂದು ವಿಜಯೇಂದ್ರ ಹೇಳಿದ್ದಾರೆ.