ಮೈಸೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ನೇಹಮಯಿ ಕೃಷ್ಣಗೆ ವಕೀಲರಿಗೆ ಕೊಡಲು ಹಣ ಎಲ್ಲಿಂದ ಬರುತ್ತೆ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಪ್ರಶ್ನಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ನ್ಯಾಯಾಲಯದಲ್ಲಿ ವಾದ ಮಾಡುವ ವಕೀಲರಿಗೆ ಲಕ್ಷಾಂತರ ರೂಪಾಯಿ ಫೀಸ್ ಕೊಡಬೇಕು. ಸ್ನೇಹಮಯಿ ಕೃಷ್ಣ ಪರ ವಾದ ಮಾಡಲು ಮೂವರು ವಕೀಲರನ್ನು ನೇಮಕ ಮಾಡಲಾಗಿದೆ.
Recruitment 2024: ಸುಪ್ರೀಂ ಕೋರ್ಟ್ʼನಲ್ಲಿದೆ ಉದ್ಯೋಗಾವಕಾಶ.! ಆಸಕ್ತರು ಇವತ್ತೇ ಅಪ್ಲೈ ಮಾಡಿ
ಹಾಗಾದರೆ ಮೂವರು ವಕೀಲರಿಗೆ ಕೊಡಲು ಅಷ್ಟೊಂದು ಹಣ ಎಲ್ಲಿಂದ ಬರುತ್ತದೆ? ಈ ಬಗ್ಗೆ ತನಿಖೆ ನಡೆಸಬೇಕು. ಸ್ನೇಹಮಯಿ ಕೃಷ್ಣಗೆ ಲಭ್ಯವಾಗುತ್ತಿರುವ ಹಣದ ಮೂಲದ ಬಗ್ಗೆ ತಿಳಿಸಬೇಕು. ಮುಡಾ ಪ್ರಕರಣದಲ್ಲಿ ಬಿಜೆಪಿ-ಜೆಡಿಎಸ್ ನಾಯಕರುಗಳು ಪ್ರೊಡ್ಯೂಸರ್ಗಳಾಗಿದ್ದಾರೆ. ಸ್ನೇಹಮಯಿ ಕೃಷ್ಣ ಡೈರೆಕ್ಟರ್ ಆಗಿದ್ದಾರೆ. ಮುಂದೆ ನಾವು ಎಲ್ಲವನ್ನೂ ಸಾಕ್ಷ್ಯಸಮೇತ ಬಹಿರಂಗಪಡಿಸುತ್ತೇವೆ ಎಂದರು.