ಭಾರತ ತಂಡದ ಸ್ಪಿನ್ ಮಾಂತ್ರಿಕ ಆರ್ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಡಿಸೆಂಬರ್ 18 ಅಂದ್ರೆ ಇಂದು ಆರ್ ಅಶ್ವಿನ್ ತಮ್ಮ 38ನೇ ವಯಸ್ಸಿಗೆ ಅಂತಾರಾಷ್ಟ್ರೀಯ ಎಲ್ಲಾ ಮಾದರಿಯ ಕ್ರಿಕೆಟ್ಗೆ ಗುಡ್ ಬೈ ಹೇಳಿದ್ದಾರೆ. ಬಲಗೈ ಆಫ್ ಸ್ಪಿನ್ ಬೌಲರ್ ಆರ್ ಅಶ್ವಿನ್ ಭಾರತದ ಅತ್ಯಂತ ಯಶಸ್ವಿ ಸ್ಪಿನ್ನರ್ಗಳಲ್ಲಿ ಒಬ್ಬರು. 1986ರಲ್ಲಿ ಚೆನ್ನೈನಲ್ಲಿ ಜನಿಸಿದ ಆರ್ ಅಶ್ವಿನ್ ಇಂದು ಕೋಟಿಗಟ್ಟಲೆ ಆಸ್ತಿಯ ಒಡೆಯ. ಅಶ್ವಿನ್ ಅವರ ವಾರ್ಷಿಕ ಆದಾಯ ಸುಮಾರು 10 ಕೋಟಿ ರೂಪಾಯಿಗಳಾಗಿದ್ದು, ಅವರು ತಿಂಗಳಿಗೆ ಸುಮಾರು 50 ಲಕ್ಷ ರೂ ಆದಾಯ ಬರುತ್ತದೆ. ಅಶ್ವಿನ್ ಅವರ ಮುಖ್ಯ ಆದಾಯದ ಮೂಲಗಳು ಕ್ರಿಕೆಟ್ ಮತ್ತು ಜಾಹೀರಾತು.
ರವಿಚಂದ್ರನ್ ಅಶ್ವಿನ್ ಕ್ರಿಕೆಟ್ ಜೊತೆಗೆ ಜಾಹೀರಾತಿನಿಂದಲೂ ಸಾಕಷ್ಟು ಸಂಪಾದಿಸುತ್ತಾರೆ. ಇದಲ್ಲದೆ ಬಿಸಿಸಿಐ ಕೇಂದ್ರ ಗುತ್ತಿಗೆಯಲ್ಲಿ ಎ ದರ್ಜೆಯ ಆಟಗಾರನಾಗಿರುವ ಅಶ್ವಿನ್ ಬಿಸಿಸಿಐನಿಂದ ಪ್ರತಿ ವರ್ಷ 5 ಕೋಟಿ ರೂ. ವೇತನ ಪಡೆಯುತ್ತಾರೆ. ಹಾಗೆಯೇ ಅಶ್ವಿನ್ ಐಪಿಎಲ್ನಲ್ಲೂ ಭಾರಿ ಮೊತ್ತದ ಸಂಭಾವನೆ ಪಡೆಯುತ್ತಾರೆ. 2021 ರಿಂದ ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿದ್ದ ಅಶ್ವಿನ್ಗೆ ಪ್ರತಿ ಆವೃತ್ತಿಗೆ 5 ಕೋಟಿ ರೂ. ವೇತನ ನೀಡಲಾಗುತ್ತಿತ್ತು. ಇದೀಗ ತನ್ನ ತವರು ತಂಡವನ್ನು ಸೇರಿಕೊಂಡಿರುವ ಅಶ್ವಿನ್ಗೆ ಚೆನ್ನೈ ಸೂಪರ್ಕಿಂಗ್ಸ್ ಫ್ರಾಂಚೈಸಿ ಪ್ರತಿ ಆವೃತ್ತಿಗೆ 9.75 ಕೋಟಿ ರೂ. ವೇತನ ನೀಡಲಿದೆ.
ಅಪ್ಪಿತಪ್ಪಿಯೂ ಈ ಆಹಾರಗಳ ಜೊತೆ ಬಾಳೆಹಣ್ಣು ತಿನ್ನಬೇಡಿ: ತಿಂದ್ರೆ ಆರೋಗ್ಯಕ್ಕೆ ತುಂಬಾ ಡೇಂಜರ್!
17 ಸೆಪ್ಟೆಂಬರ್ 1986 ರಂದು ಜನಿಸಿದ ಅಶ್ವಿನ್ ಅವರು ಚೆನ್ನೈನಲ್ಲಿ ವಾಸವಿರುವ ಮನೆಯ ಬೆಲೆ 9 ಕೋಟಿ ಎಂದು ಹೇಳಲಾಗುತ್ತದೆ. ಹಾಗೆಯೇ ಅಶ್ವಿನ್ ಅವರಿಗೂ ಐಷಾರಾಮಿ ಕಾರುಗಳೆಂದರೆ ಒಲವು. ಅವರ ಬಳಿ ಐಷಾರಾಮಿ ಬ್ರಾಂಡ್ ಕಾರುಗಳಿವೆ. ಅವರ ಬಳಿ Audi Q7 SUV, ರೋಲ್ಸ್ ರಾಯ್ಸ್ ಕಾರು ಕೂಡ ಇದೆ. ಈ ಕಾರಿನ ಬೆಲೆ ಸುಮಾರು 6 ಕೋಟಿ ಎಂದು ಹೇಳಲಾಗುತ್ತಿದೆ.
ಆರ್ ಅಶ್ವಿನ್ ಮಿಂತ್ರಾ, ಬಾಂಬೆ ಶೇವಿಂಗ್ ಕಂಪನಿ, ಮನ್ನಾ ಫುಡ್ಸ್, ಅರಿಸ್ಟೋಕ್ರಾಟ್ ಬ್ಯಾಗ್ಸ್, ಒಪ್ಪೋ, ಮೂವ್, ಸ್ಪೇಸ್ಮೇಕರ್ಸ್, ಕೋಕ್ ಸ್ಟುಡಿಯೋ ತಮಿಳು ಮತ್ತು ಡ್ರೀಮ್11 ಬ್ರ್ಯಾಂಡ್ಗಳನ್ನು ಎಂಡೋರ್ಸ್ ಮಾಡುತ್ತಿದ್ದಾರೆ. ಈ ಕಂಪನಿಗಳಿಂದಲೂ ಅವರು ಸಾಕಷ್ಟು ಹಣ ಸಂಪಾದಿಸುತ್ತಾರೆ. ಮಾಧ್ಯಮ ವರದಿಗಳ ಪ್ರಕಾರ,
ಅವರ ನಿವ್ವಳ ಮೌಲ್ಯ 16 ಮಿಲಿಯನ್ ಡಾಲರ್ ಅಂದರೆ ಸರಿಸುಮಾರು 132 ಕೋಟಿ. ಅಶ್ವಿನ್ಗೆ ಸರಳತೆ ಎಂದರೆ ತುಂಬಾ ಇಷ್ಟ. ಅವರಿಗೆ ಆಡಂಬರದಲ್ಲಿ ನಂಬಿಕೆಯಿಲ್ಲ. ಆರ್ ಅಶ್ವಿನ್ ವಾಸವಿರುವ ಮನೆ ಸುಮಾರು 9 ಕೋಟಿ ರೂಪಾಯಿ ಎಂದು ಹೇಳಲಾಗಿದೆ. ಆರ್ ಅಶ್ವಿನ್ ಅವರ ಕುಟುಂಬದಲ್ಲಿ ಅವರ ತಂದೆ ರವಿಚಂದ್ರನ್, ತಾಯಿ ಚಿತ್ರಾ ರವಿಚಂದ್ರನ್, ಪತ್ನಿ ಪ್ರೀತಿ ನಾರಾಯಣನ್ ಮತ್ತು ಪುತ್ರಿಯರಾದ ಅಖಿರಾ ಅಶ್ವಿನ್ ಮತ್ತು ಆಧ್ಯಾ ಅಶ್ವಿನ್ ಇದ್ದಾರೆ.