ಆನೇಕಲ್: ಲಾರಿ ಚಾಲಕನಿಗೆ ಸಂಚಾರಿ ಪೊಲೀಸರು ಹಲ್ಲೆ ಮಾಡಿರುವ ಘಟನೆ ಹೊಸೂರು ಮುಖ್ಯರಸ್ತೆ ನೈಸ್ ರೋಡ್ ಜಂಕ್ಷನ್ ಬಳಿ ಜರುಗಿದೆ.
ಹಲ್ಲೆ ಖಂಡಿಸಿ ಹೆದ್ದಾರಿಗೆ ಟ್ರಕ್ ಮತ್ತು ಟಿಪ್ಪರ್ ಲಾರಿ ಅಡ್ಡ ನಿಲ್ಲಿಸಿ ಲಾರಿ ಚಾಲಕರು ಪ್ರತಿಭಟನೆ ಮಾಡಿದ್ದಾರೆ. ನಿನ್ನೆ ರಾತ್ರಿ 9:30 ರ ಸುಮಾರಿಗೆ ಘಟನೆ ಜರುಗಿದೆ
ಸುಮಾರು ಒಂದು ಗಂಟೆ ಟ್ರಾಫಿಕ್ ಜಾಮ್ ಉಂಟಾಗಿದ್ದು, ಸಂಪೂರ್ಣ ಹೊಸೂರು ಮುಖ್ಯರಸ್ತೆ ಮತ್ತು ನೈಸ್ ರಸ್ತೆ ಜಾಮ್ ಆಗಿತ್ತು. ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ಪೊಲೀಸರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಹಣ ಪಡೆದು ದಾಖಲೆ ಕಸಿದುಕೊಂಡು ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದೆ.
ಇದರಿಂದ ರೊಚ್ಚಿಗೆದ್ದ ಲಾರಿ ಮತ್ತು ಟಿಪ್ಪರ್ ಚಾಲಕರಿಂದ ದಿಢೀರ್ ಪ್ರತಿಭಟನೆ ನಡೆದಿದೆ. ಚಾಲಕರ ಪ್ರತಿಭಟನೆಯಿಂದ ಪೊಲೀಸರು ಹೈರಾಣಾಗಿದ್ದಾರೆ.
ಕ್ರೇನ್ ಮೂಲಕ ಲಾರಿ ತೆರವಿಗು ಪ್ರತಿಭಟನಾಕಾರರು ಅವಕಾಶ ನೀಡಿಲ್ಲ. ಕೊನೆಗೆ ಲಾರಿ ಮತ್ತು ಟಿಪ್ಪರ್ ಲಾರಿ ತೆರವು ಮಾಡಲಾಗಿದೆ.
ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಗೆ ವಾಹನ ಸವಾರರು ಹಿಡಿಶಾಪ ಹಾಕಿದ್ದಾರೆ. ಸದ್ಯ ಹೆದ್ದಾರಿಗೆ ಅಡ್ಡ ನಿಲ್ಲಿಸಿದ್ದ ಲಾರಿ ವಶಕ್ಕೆ ಪಡೆಯಲಾಗಿದೆ.
ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.