ಬಾಗಲಕೋಟೆ :ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿ ಹೊಸೂರ ಹಜಾರೆ ಫೌಂಡೇಷನ್ ಪದ್ಮಾವತಿ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ಸಂಯೋಗದಲ್ಲಿ ಡಿಸೆಂಬರ್ ೨೦ –೨೧ ರಂದು ೧೦ ನೇ ಹಜಾರೆ ಹಬ್ಬ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಪ್ರತಿವರ್ಷದಂತೆ ಈ ವರ್ಷವೂ ಸಾಧನೆ ಮಾಡಿದ ಸಾಧಕರಿಗೆ ಪದ್ಮಾವತಿ ಪುರಸ್ಕಾರ ಐದು ಜನರಿಗೆ ನೀಡಲಿದ್ದೇವೆ ಎಂದು ತಿಳಿಸಿದರು.
೧೦ ನೇ ಹಜಾರೆ ಹಬ್ಬ ಕಾರ್ಯಕ್ರಮದಲ್ಲಿ ಎಲ್ಲಾ ವಿದ್ಯಾರ್ಥಿಗಳು ಮತ್ತು ಪಾಲಕರು ಪಾಲ್ಗೊಳ್ಳಲಿದ್ದಾರೆ. ಅದರ ಜೊತೆಗೆ ರಬಕವಿ ಹೊಸೂರು ಬನಹಟ್ಟಿ ರಾಂಪುರ್ ನಗರದ ಎಲ್ಲ ನಮ್ಮ ಹಿತೈಷಿಗಳು ಈ ಕಾರ್ಯಕ್ರಮಕ್ಕೆ ಬಂದು ಯಶಸ್ಸು ಮಾಡಬೇಕೆಂದು ಹಜಾರೆ ಫೌಂಡೇಶನ್ ಸಂಸ್ಥೆಯ ಮುಖ್ಯಸ್ಥರಾದ ಸತೀಶ ಹಜಾರೆ ಮನವಿ ಮಾಡಿಕೊಂಡಿದ್ದಾರೆ.
ಇದೇ ಸಂದರ್ಭದಲ್ಲಿ ಭಾರತಿ ತಾಳಿಕೋಟಿ ಸಂಸ್ಥೆಯ ಆಡಳಿತ ಅಧಿಕಾರಿಗಳು. ಬಸವರಾಜ ಕಲಾದಗಿ ಪ್ರಾಚಾರ್ಯರು. ಶ್ರೀಶೈಲ ಕುಂಬಾರ ಪ್ರಾಚಾರ್ಯರು. ಸತ್ಯಪ್ಪ ಮಗದುಮ. ಅರುಣ್ ಬುದ್ನಿ. ವೆಂಕನಗೌಡ ಪಾಟೀಲ. ಬಸವರಾಜ ಶಿರೋಳ. ವೆಂಕಟೇಶ ನಿಂಗಸಾನಿ. ಡಾ ದೀಪಾ ಡಂಗಿ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.
ಪ್ರಕಾಶ ಕುಂಬಾರ
ಬಾಗಲಕೋಟೆ