ಬೆಂಗಳೂರು:- ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ತನ್ನ ಸಿಬ್ಬಂದಿಗಳ ರಕ್ಷಣೆಗಾಗಿ ಸುಹೃದ್ ಆ್ಯಪ್ ಬಿಡುಗಡೆಗೊಳಿಸಿದೆ.
ಸುಹೃದ್ ಎಂದರೆ ಒಳ್ಳೆಯ ಹೃದಯ ಎಂದರ್ಥ. ಕರ್ತವ್ಯ ನಿರತ ವೈದ್ಯಕೀಯ ಸಿಬ್ಬಂದಿಗಳು ಯಾವುದೇ ರೀತಿಯ ಕಷ್ಟಕ್ಕೆ ಸಿಲುಕಿದಾಗ ಒಬ್ಬೊರಿಗೊಬ್ಬರು ಹೃದಯವಂತಿಕೆಯಿಂದ ನೆರವಾಗಲಿ ಎಂಬ ಉದ್ದೇಶದೊಂದಿಗೆ ಈ ಆಪ್ ಅಭಿವೃದ್ಧಿ ಪಡಿಸಲಾಗಿದೆ. ಇತ್ತೀಚಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳ ಮೇಲೆ ಲೈಗಿಂಕ ಕಿರುಕುಳ, ಹಿಂಸಾಚಾರ ಸೇರಿದಂತೆ ಅತ್ಯಾಚಾರ ಪ್ರಕರಣಗಳು ನಡೆಯುತ್ತಿದೆ. ಇದನ್ನು ನಿಯಂತ್ರಿಸಲು ಪ್ರಥಮ ಬಾರಿಗೆ ಈ ಕ್ರಮ ಕೈಗೊಳ್ಳಲಾಗಿದೆ.
ಜಯದೇವ ಆಸ್ಪತ್ರೆಯ ಲೈಗಿಂಕ ಕಿರುಕುಳ ತಡೆಗಟ್ಟುವಿಕೆ ತಂಡದ ವತಿಯಿಂದ ಈ ಆಪ್ ಅಭಿವೃದ್ಧಿ ಪಡಿಸಲಾಗಿದೆ. ಇದರ ನೇತೃತ್ವವನ್ನು ಪ್ರೊ.ಜಯಶ್ರೀ ಖರ್ಗೆ ಅವರು ವಹಿಸಿದ್ದಾರೆ. ಡಾ.ಬಂದನ ಅವರು ನಾಥ್ ನೀಡಿದ್ರೆ, ಇಂಜಿನಿಯರ್ ನವೀನ್ ಹೆಗ್ಡೆ ಈ ಆಪ್ ಅಭಿವೃದ್ಧಿ ಪಡಿಸಿದ್ದಾರೆ.