ಬೆಳಗಾವಿಯ ಚಳಿಗಾಲದ ಅಧಿವೇಶನದ ಎಂಟನೆ ದಿನವಾದ ಇಂದು ಹತ್ತಕ್ಕೂ ಅಧಿಕ ಪ್ರತಿಭಟನೆಗಳು ನಡೆದವು. ಕರ್ನಾಟಕ ಸ್ಟೇಟ್ ಕಂಟ್ರ್ಯಾಕ್ಟರ್ ಅಸೋಸಿಯೇಷನ್ ವತಿಯಿಂದ ಬೆಳಗಾವಿಯ ಸುವರ್ಣ ಗಾರ್ಡನ್ ನಲ್ಲಿ ಸರ್ಕಾರದ ಬಾಕಿ ಬಿಲ್ ಕೊಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.
ಕಳೆದ ಎರಡು ವರ್ಷದಿಂದ ಬಾಕಿ ಬಿಲ್ ಕೊಡದೇ ಇರುವ ಸರ್ಕಾರ ಬೇಗ ಬಿಲ್ ಕೊಡಲು ಮನವಿ ಮಾಡಿದ ಗುತ್ತಿಗೆದಾರರು ೪% ವ್ಯಾಟ್ ೧೨% ಕ್ಕೆ ಏರಿಕೆ ಮಾಡಿದ್ದಕ್ಕೆ ವಿರೋಧ ವ್ಯಕ್ತಪಡಿಸಿದರಲ್ಲದೆ ಲ್ಯಾಂಡ್ ಆರ್ಮಿ ಹಾಗೂ ನಿರ್ಮಿತಿ ಕೇಂದ್ರಕ್ಕೆ ಕೆಲಸ ನೀಡುತ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸಿ ಟೆಂಡರ್ ವೇಳೆ ಪ್ಯಾಕೇಜ್ ಪದ್ಧತಿ ನಿಲ್ಲಿಸುವಂತೆ ಒತ್ತಾಯಿಸಿದರು.
ಪ್ರತಿಭಟನೆ ವೇಳೆ ಸರ್ಕಾರದ ವಿರುದ್ಧ ಅಕ್ರೋಶ ವ್ಯಕ್ಯಪಡಿಸಿ ಬಾಕಿ ಬಿಲ್ ಕೊಡಲು ಆಗದಿದ್ದರೆ ನನ್ನ ಕುಟುಂಬದವರು ಬದುಕುವದಕ್ಕೆ ಸಹಾಯ ಮಾಡಿ ನಮಗೆ ಆತ್ಮಹತ್ಯೆ ಮಾಡಿಕೊಳ್ಳಲು ಬಿಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾನ್ʼಸ್ಟಿಕ್ ಪಾತ್ರೆಗಳಿಂದ ಅಡುಗೆ ಮಾಡಿದರೆ ಕ್ಯಾನ್ಸರ್ ಬರುತ್ತಾ..? ಇಲ್ಲಿದೆ ಉತ್ತರ
ಕರ್ನಾಟಕ ರಾಜ್ಯ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ವಿವಿಧ ಬೇಡಿಕೆಗಳಗೆ ಅಗ್ರಹಿಸಿ ಪ್ರತಿಭಟನೆ ನಡೆಸಿ ಸಮಾನ ಕೆಲಸಕ್ಕೆ ಸಮಾನ ವೇತನ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಸಂವಿಧಾನದ ಪೀಠಿಕೆ ಓದುವುದರ ಮೂಲಕ ಹೋರಾಟ ಕೈಗೊಂಡು 2025-26ನೇ ವರ್ಷದ ಅತಿಥಿ ಶಿಕ್ಷಕರ ನೇಮಕಾತಿಯಲ್ಲಿ ಕಡ್ಡಾಯವಾಗಿ ಮೆರಿಟ್ ಪದ್ಧತಿ ಕೈ ಬಿಟ್ಟು ಸೇವಾ ಹಿರಿತನಕ್ಕೆ ಆದ್ಯತೆ ನೀಡಬೇಕು. ಹಾಗೂ ಪ್ರತಿ ಮಾಸಿಕ ಕನಿಷ್ಠ ರೂ 30000 ಗೌರವ ಧನ ನೀಡಬೇಕು ಎಂದು ಒತ್ತಾಯಿಸಿದರು.