ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ದರ್ಶನ್ ಹಾಗೂ ಪವಿತ್ರಾ ಗೌಡಗೆ ಹೈಕೋರ್ಟ್ ಜಾಮೀನು ನೀಡಿದೆ. ಪವಿತ್ರಾ ಗೌಡ ಜಾಮೀನು ಪಡೆದು ಹೊರ ಬಂದ ಸುದ್ದಿ ಕೇಳಿ ಪವಿತ್ರಾ ಮಾಜಿ ಪತಿ ಸಂಜಯ್ ಸಿಂಗ್ ಖುಷಿಯಾಗಿದ್ದಾರೆ. ಈ ಮಧ್ಯೆ ಸಂಜಯ್ ಸಿಂಗ್ ಯೂಟ್ಯೂಬ್ ಸಂದರ್ಶನದಲ್ಲಿ ಸೀಕ್ರೆಟ್ ಒಂದನ್ನು ಬಹಿರಂಗ ಪಡಿಸಿದ್ದಾರೆ.
ಸಂಜಯ್ ಸಿಂಗ್ ಅವರು ಯೂಟ್ಯೂಬ್ ಸಂದರ್ಶನದಲ್ಲಿ ಹಲವು ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಅದರಲ್ಲಿ ಅವರ ಮಗಳು ಖುಷಿಯ ವಿಚಾರವೂ ಸೇರಿದೆ. ‘ನನ್ನ ಮಗಳು ನನಗೆ ಡ್ಯಾಡಿ, ನಾನಾ ಹಾಗೂ ದಾದಾ ಅಂತೆಲ್ಲ ಕರೆಯುತ್ತಾಳೆ. ಆಗಾಗ ನಾನು ಫೋನಿನಲ್ಲಿ ಮಗಳು ಖುಷಿಯ ಜೊತೆ ಮಾತನ್ನಾಡುತ್ತೇನೆ. ಒಮ್ಮೆ ಅವಳು ನಟ ದರ್ಶನ್ ಬಗ್ಗೆ ಹೇಳುತ್ತ ‘ನಾನು ದರ್ಶನ್ಗೆ ಅಪ್ಪ ಅಂತ ಕರೆಯಲ್ಲ’ ಎಂದು ಹೇಳಿದ್ದಾಗಿ ಪವಿತ್ರಾ ಗೌಡ ಹೇಳಿದ್ದಾರೆ.
‘ಲವ್ ಮ್ಯಾರೇಜ್ ಮಾಡಿಕೊಂಡು ಪವಿತ್ರಾ ಗೌಡ ನ್ನೊಂದಿಗೆ ದಾಂಪತ್ಯ ಜೀವನ ಸಾಗಿಸುತ್ತಿದ್ದರು. ಆದರೆ, ಅವರ ಸ್ನೇಹಿತೆಯಾಗಿ ಮನೆಗೆ ಬರುತ್ತಿದ್ದ ಕನ್ನಡದ ಸೀರಿಯಲ್ ನಟಿಯೊಬ್ಬರು ಪವಿತ್ರಾ ಗೌಡ ಅವರಿಗೆ ಈ ಬಣ್ಣದ ಲೋಕದ ಹುಟ್ಟು ಹಿಡಿಸಿದ್ದಾರೆ. ಅವರಿಂದಲೇ ಪವಿತ್ರಾ ಗೌಡ ಅವರು ಸಿನಿಮಾ, ಶೂಟಿಂಗ್, ಕೆರಿಯರ್ ಅಂತ ಸಂಸಾರ ತ್ಯಜಿಸಿ ಮೇಕಪ್ ಹಾಕಿಕೊಳ್ಳಲು ಶುರು ಮಾಡಿದ್ದು’ ಎಂದು ಸಂಜಯ್ ಸಿಂಗ್ ಹೇಳಿದ್ದ್ಆರೆ.
‘ನಾವಿಬ್ಬರು ಲವ್ ಮ್ಯಾರೇಜ್ ಮಾಡಿಕೊಂಡು, ಮಗಳೊಬ್ಬಳಿಗೆ ಪೋಷಕರಾಗಿ ಸಂಸಾರ ನಡೆಸುತ್ತಿದ್ದೆವು. ಆಗ ನಮ್ಮ ಮನೆಗೆ ಪವಿತ್ರಾ ಜೊತೆ ನಟಿ ‘ಕೋಳಿ ರಮ್ಯಾ’ ಬರುತ್ತಿದ್ದರು. ಅವರು ನಮ್ಮ ಮನೆಯಲ್ಲಿ ಕೂಡ ಬಹಳಷ್ಟು ಸಮಯ ಇರುತ್ತಿದ್ದರು. ಆ ಸಮಯದಲ್ಲಿ ನನ್ನ ಹೆಂಡತಿಯಾಗಿದ್ದ ಪವಿತ್ರಾ ಗೌಡ ಅವರಿಗೆ ಸಿನಿಮಾ ನಟಿಯಾಗಲೇಬೇಕು ಎಂಬ ಆಸೆ ಹುಟ್ಟಿದ್ದು, ಅದಕ್ಕಾಗಿ ಪವತ್ರಾ ಹಠ ಹಿಡಿದಿದ್ದು. ಆ ಬಳಿಕ ಪವಿತ್ರಾಗೆ ಬಣ್ಣದ ಲೋಕದ ಸೆಳೆತ ಜಾಸ್ತಿಯಾಗಿ, ಬಳಿಕ ನಮ್ಮ ಸಂಸಾರ ವಿಚ್ಛೇದನದತ್ತ ಸರಿಯಿತು’ ಎಂದು ಸಂಜಯ್ ಸಿಂಗ್ ಬೇಸರ ಹೊರ ಹಾಕಿದ್ದಾರೆ.