ಬೆಂಗಳೂರು: ಶಿವರಾಜ್ ಕುಮಾರ್ ಅವರಿಗೆ ಆರೋಗ್ಯ ಕೈಕೊಟ್ಟ ಸುದ್ದಿ ಈ ಮೊದಲಿನಿಂದಲೂ ಹರಿದಾಡುತ್ತಲೇ ಇತ್ತು. ಇತ್ತೀಚೆಗೆ ಅವರೇ ಈ ವಿಚಾರವನ್ನು ಖಚಿಪಡಿಸಿದ್ದರು. ತಮಗೆ ಅನಾರೋಗ್ಯ ಆಗಿದೆ ಎಂಬುದನ್ನು ಹೇಳಿದ್ದರು ಶಿವಣ್ಣ. ಆದರೆ, ಏನಾಗಿದೆ ಎಂಬ ವಿಚಾರವನ್ನು ರಿವೀಲ್ ಮಾಡಿರಲಿಲ್ಲ. ಈಗ ಶಿವರಾಜ್ಕುಮಾರ್ ಅವರು ಅಮೆರಿಕ ಹೋಗುವ ದಿನ ಹತ್ತಿರ ಬಂದೇ ಬಿಟ್ಟಿದೆ. ಅಲ್ಲಿ ಅವರು ಸರ್ಜರಿ ಮಾಡಿಸಿಕೊಳ್ಳಲಿದ್ದಾರೆ.
ಹೌದು ನಟ ಶಿವರಾಜ್ ಕುಮಾರ್ ಅಮೆರಿಕದಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಲಿದ್ದಾರೆ. ಆದ್ದರಿಂದ ಇಂದು ಸಂಜೆ ಅಮೆರಿಕಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ನಾಗವಾರದಲ್ಲಿರುವ ಅವರ ನಿವಾಸಕ್ಕೆ ಕಿಚ್ಚ ಸುದೀಪ್ ಮತ್ತು ಬಿ.ಸಿ ಪಾಟೀಲ್ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.
Bal Jeevan Bima: ದಿನಕ್ಕೆ 18 ರೂಪಾಯಿ ಉಳಿಸಿದರೆ 3 ಲಕ್ಷ ರೂಪಾಯಿ ಪಡೆಯಬಹುದು..! ಹೇಗೆ ಗೊತ್ತಾ..?
ಇದೇ ಡಿ.24ರಂದು ಶಿವಣ್ಣಗೆ ಸರ್ಜರಿ ನಡೆಯಲಿದ್ದು, ಇಂದು ರಾತ್ರಿ ಪತ್ನಿ ಮತ್ತು ಮಗಳು ನಿವೇದಿತಾ ಜೊತೆ ಯುಎಸ್ಗೆ ನಟ ತೆರಳಿದ್ದಾರೆ. ಹಾಗಾಗಿ ಅವರು ವಿದೇಶಕ್ಕೆ ಹೊರಡುವ ಮುನ್ನ ಶಿವಣ್ಣ ಮನೆಗೆ ಸುದೀಪ್ ಮತ್ತು ಬಿ.ಸಿ ಪಾಟೀಲ್ ಭೇಟಿ ನೀಡಿ ಕುಶಲೋಪರಿ ವಿಚಾರಿಸಿದ್ದಾರೆ.