ಬೆಂಗಳೂರು: ಹೊಸ ವರ್ಷಕ್ಕೆ ಬೆಂಗಳೂರು ಸಜ್ಜಾಗ್ತಿದೆ. ಇತ್ತ ಪೆಡ್ಲರ್ ಗಳು ಫುಲ್ ಆ್ಯಕ್ಟಿವ್ ಆಗಿದೆ. ಇದರಲ್ಲಿ ಕಡಿಮೆ ಬೆಲೆಗೆ ಸಿಗುವ ಡ್ರಗ್ ಅಂದ್ರೆ ಅದು ಗಾಂಜಾ. ಪೊಲೀಸರು ಸ್ವಲ್ಪ ಯಾಮಾರಿದ್ರೂ ನ್ಯೂಇಯರ್ ದಿನ ಗಾಂಜಾ ಘಮಲು ಸಿಲಿಕಾನ್ ಸಿಟಿಯಲ್ಲಿ ಹಬ್ಬುತ್ತಿತ್ತು. ಆದರೆ ಪೊಲೀಸರ ಚಾಣಾಕ್ಷತನದ ಕೆಲಸ ಇದನ್ನು ತಪ್ಪಿಸಿದೆ.
ಐಟಿ ಹಬ್ ಬೆಂಗಳೂರಿಗೆ ಮಾದಕ ವಸ್ತು ಸಾಗಾಟವಾಗ್ತಿರೋದು ಹೊಸದೆನಲ್ಲ. ಪೊಲೀಸರು ಎಷ್ಟೇ ಡ್ರಗ್ ಕಂಟ್ರೋಲ್ ಮಾಡುತ್ತಿದ್ರು ಸಹ ಡ್ರಗ್ ಬೇರೆ ಬೇರೆ ರೀತಿಯಲ್ಲಿ ಸಿಟಿಯನ್ನು ಸೇರ್ತಿದೆ. 2025 ನ್ನ ವೆಲ್ ಕಮ್ ಮಾಡಿಕೊಳ್ಳೋಕೆ ಬೆಂಗಳೂರು ಜನ ತುದಿಗಾಲಲ್ಲಿ ನಿಂತಿದ್ದಾರೆ. ಇದೇ ಟೈಮಲ್ಲಿ ಲಕ್ಷ-ಲಕ್ಷ ಮೌಲ್ಯದ ಗಾಂಜಾವನ್ನು ಬೆಂಗಳೂರು ಪೊಲೀಸರು ಸೀಜ್ ಮಾಡಿದ್ದಾರೆ.
ಯೆಸ್ ಹೊಸ ವರ್ಷ ಸಮೀಪದಲ್ಲಿರುವಾಗಲೇ ಅಶೋಕ ನಗರ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ.ಸಿನಿಮಾ ಮಾದರಿಯಲ್ಲಿ ಗಾಂಜಾ ಸಾಗಿಸುತ್ತಿದ್ದವರನ್ನ ಅಂದರ್ ಮಾಡಿ 31 ಲಕ್ಷ ಮೌಲ್ಯದ 77 ಕೆಜಿ ಮಾದಕ ವಸ್ತು ಸೀಜ್ ಮಾಡಿದ್ದಾರೆ. ಈ ಪೋಟೋದಲ್ಲಿ ಅಮಾಯಕರಂತೆ ನಿಂತಿರುವ ಶ್ರೀಕಾಂತ್, ಮುನಿರಾಜು, ಚಂದ್ರಕಾಂತ್, ಬಾಲಕೃಷ್ಣ ಬಂಧಿತ ಆರೋಪಿಗಳಾಗಿದ್ದಾರೆ.ಈ ಕಿಲಾಡಿಗಳ ಪ್ಲಾನ್ ನೋಡಿ ಪೊಲೀಸರೇ ಒಂದು ಕ್ಷಣ ಶಾಕ್ ಆಗಿದ್ದಾರೆ.ವಿಶಾಖಪಟ್ಟಣಂನಿಂದ ಬುಲೆರೋ ಪಿಕ್ ಅಪ್ ವಾಹನದ ಹಿಂಬದಿಯಲ್ಲಿ ಬೇರೆಯದ್ದೆ ಬಾಡಿ ನಿರ್ಮಿಸಿ ಅದರ ಕೆಳಗಡೆ ಐದು ಕೆಜಿ ತೂಕದ ಗಾಂಜಾ ಪ್ಯಾಕೇಟ್ ಗಳನ್ನು ಇಟ್ಟು ಸಾಗಿಸುತ್ತಿದ್ದರು.
ನಿಮಗೆ ಅರಿವಿಲ್ಲದೆ PAN Card ದುರ್ಬಳಕೆ ಆಗಿರಬಹುದು ಎಂಬ ಅನುಮಾನವಿದ್ದರೆ ಹೀಗೆ ಮಾಡಿ ಸಾಕು..! ನಿಮ್ಮ ಕಾರ್ಡ್ ಸೇಫ್
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಶೋಕನಗರ ಪೊಲೀಸರು ಬನ್ನೇರುಘಟ್ಟ ರಸ್ತೆಯ ಕ್ರಿಶ್ಚಿಯನ್ ಸ್ಮಶಾನದ ಪಕ್ಕ ವಾಹನ ನಿಲ್ಲಿಸಿದ್ದ ವೇಳೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನೂ ಯಲಹಂಕ ಪೊಲೀಸರು ಸಹ ಭರ್ಜರಿ ಕಾರ್ಯಾಚರಣೆ ನಡೆಸಿ
ನ್ಯೂಇಯರ್ ಗೆ ಕೆಕ್ಕೇರಿಸಲು ರೆಡಿಯಾಗಿದ್ದ ಗಾಂಜಾ ಸೀಜ್ ಮಾಡಿ ಟ್ರಕ್, ಇನ್ನೋವಾ ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ನಾಲ್ವರು ಆರೋಪಿಗಳ ಬಂಧಿಸಿದ್ದಾರೆ.ಆರೋಪಿಗಳು ಹೊಸ ವರ್ಷದ ಸಂದರ್ಭದಲ್ಲಿ ಹೆಚ್ಚಿನ ಬೆಲೆಗೆ ಗಾಂಜಾ ಮಾರಾಟ ಮಾಡಲು ಪ್ಲಾನ್ ಮಾಡಿದ್ದರು ಎಂಬುದು ಗೊತ್ತಾಗಿದೆ. ನಿಟ್ಟೆ ಮೀನಾಕ್ಷಿ ಕಾಲೇಜು ಕಡೆಗೆ ಹೋಗುವ ರಸ್ತೆಯಲ್ಲಿ ಗಾಂಜಾ ಇದ್ದ ಟ್ರಕ್ ನಿಲ್ಲಿಸಿಕೊಂಡಿದ್ದಾಗ
ದಾಳಿ ನಡೆಸಿ 74 ಲಕ್ಷ ಮೌಲ್ಯದ 93 ಕೆಜಿ ಸೇರಿ 1 ಟ್ರಕ್, ಇನ್ನೋವಾ ಕಾರು, 4 ಮೊಬೈಲ್ ಸೀಜ್ ಮಾಡಿದ್ದಾರೆ. ಇನ್ನೂ ಬಾಣಸವಾಡಿ, ಅಮೃತಹಳ್ಳಿ ಪೊಲೀಸರು ಸಹ ಕಾರ್ಯಾಚರಣೆ ನಡೆಸಿ16 ವರೆ ಲಕ್ಷ ಮೌಲ್ಯದ 16 ಕೆಜಿ ಗಾಂಜಾ ಸೀಜ್ ಮಾಡಿ ಐವರ ಆರೋಪಿಗಳನ್ನು ಅಂದರ್ ಮಾಡಿದ್ದಾರೆ. ಒಟ್ಟಾರೆ ಹೊಸ ವರ್ಷದಲ್ಲಿ ಕಿಕ್ಕೇರಿಸಲು ರೆಡಿಯಾಗಿದ್ದ ಗಾಂಜಾವನ್ನು ಸೀಜ್ ಮಾಡಿರುವ ಬೆಂಗಳೂರು ಪೊಲೀಸರ ಕೆಲಸವನ್ನು ಶ್ಲಾಘಿಸಲೇಬೇಕು.