ಕಿರಣ್ ರಾವ್ ನಿರ್ದೇಶನದ ಆಮೀರ್ ಖಾನ್ ನಿರ್ಮಾಣದ ಲಾಪತಾ ಲೇಡೀಸ್ ಸಿನಿಮಾ ಆಸ್ಕರ್ ರೇಸ್ ನಿಂದ ಹೊರಬಿದ್ದಿದೆ. ಆಸ್ಕರ್ ಅಂತಿಮ ಪಟ್ಟಿಯನ್ನು ಡಿಸೆಂಬರ್ 17 ರಂದು ಪ್ರಕಟಿಸಲಾಗಿದ್ದು ಅತ್ಯುತ್ತಮ ಅಂತರಾಷ್ಟ್ರೀಯ ಫೀಚರ್ ವಿಭಾಗದಲ್ಲಿ ಆಸ್ಕರ್ 2025ರ ಕಿರುಪಟ್ಟಿಗೆ ಪ್ರವೇಶಿಸಲು ಲಾಪತಾ ಲೇಡೀಸ್ ಸಿನಿಮಾ ವಿಫಲವಾಗಿದೆ.. ಬ್ರಿಟಿಷ್–ಭಾರತೀಯ ಚಲನಚಿತ್ರ–ನಿರ್ಮಾಪಕಿ ಸಂಧ್ಯಾ ಸೂರಿಯವರ ಸಂತೋಷ್ ಪಟ್ಟಿಯಲ್ಲಿ ಸ್ಥಾನ ಪಡೆದಿದುಕೊಂಡಿದೆ.
ಲಾಪತಾ ಲೇಡೀಸ್ ಸಿನಿಮಾ 97ನೇ ಅಕಾಡೆಮಿ ಅವಾರ್ಡ್ಸ್ ಗೆ ಭಾರತದಿಂದ ಅಧಿಕೃತವಾಗಿ ಪ್ರವೇಶ ಪಡೆದಿತ್ತು. ಅಸ್ಸಾಮಿ ಚಲನಚಿತ್ರ ನಿರ್ಮಾಪಕ ಜಾಹ್ನು ಬರುವಾ ಅಧ್ಯಕ್ಷತೆಯ 13 ಸದಸ್ಯರ ಆಯ್ಕೆ ಸಮಿತಿಯು ಈ ಸಿನಿಮಾವನ್ನು ಆಯ್ಕೆ ಮಾಡಿತ್ತು. ಆದರೆ ಈಗ ಅಂತಿಮವಾಗಿ 5 ಸಿನಿಮಾಗಳು ಆಯ್ಕೆಯಾಗಿವೆ ಎಂದು ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್& ಸೈನ್ಸಸ್ ಘೋಷಿಸಿದೆ.
ಸಂಧ್ಯಾ ಸೂರಿಯವರ ಸಂತೋಷ್ ಪಟ್ಟಿಯಲ್ಲಿ ಸ್ಥಾನ ಪಡೆದಿದುಕೊಂಡಿರುವುದು ಗಮನಾರ್ಹವಾಗಿದೆ. ಚಿತ್ರದಲ್ಲಿ ಭಾರತೀಯ ನಟರಾದ ಶಹಾನಾ ಗೋಸ್ವಾಮಿ ಮತ್ತು ಸುನೀತಾ ರಾಜ್ವರ್ ನಟಿಸಿದ್ದಾರೆ.
ಅಂತಿಮ ಆಸ್ಕರ್ ನಾಮನಿರ್ದೇಶನಗಳನ್ನು ಜನವರಿ 17 ರಂದು ಪ್ರಕಟಿಸಲಾಗುತ್ತದೆ ಎಂದು ವರದಿಯಾಗಿದೆ. ಅಮೀರ್ ಖಾನ್ ಮತ್ತು ಕಿರಣ್ ರಾವ್ ಕಳೆದ ಕೆಲವು ವಾರಗಳಿಂದ ಅಮೇರಿಕಾದಲ್ಲಿ ಚಿತ್ರದ ಪ್ರಚಾರ ನಡೆಸುತ್ತಿದ್ದಾರೆ. ಈ ತಿಂಗಳ ಆರಂಭದಲ್ಲಿ, ಅಲ್ಫೊನ್ಸೊ ಕ್ಯುರಾನ್ ಚಿತ್ರಕ್ಕಾಗಿ BAFTA ಪ್ರಚಾರಕ್ಕಾಗಿ ಪ್ರದರ್ಶನವನ್ನು ಆಯೋಜಿಸಿದರು.