ಇತ್ತೀಚೆಗೆ ಲಾಟರಿ ಮೂಲಕ ಹಲವರ ಲಕ್ ಬದಲಾಗಿದೆ. ಕಡು ಬಡವರಾಗಿದ್ದವರು ಕೂಡ ರಾತ್ರೋ ರಾತ್ರಿ ಕೋಟ್ಯಾಧಿಪತಿಗಳಾಗ್ತಿದ್ದಾರೆ. ಇದೀಗ ಅದೇ ರೀತಿಯ ಲಕ್ ಮೂಲಕ ಬರೋಬ್ಬರಿ 287 ಕೋಟಿ ಗೆದ್ದ ರೈತ ಲಾಟರಿ ಹೊಡೆದ ಒಂದೇ ಒಂದು ವಾರಕ್ಕೆ ದುರಂತ ಅಂತ್ಯ ಕಂಡಿದ್ದಾಣೆ.
ಬ್ರೆಜಿಲ್ ನ ಆ್ಯಂಟೋನಿಯೊ ಲೋಪ್ಸ್ ಸಿಕ್ವೈರಾ ಹೆಸರಿನ ರೈತ 83 ಸೆಂಟ್ಗಳನ್ನ ನೀಡಿ ಒಂದು ಲಾಟರಿ ಟಿಕೆಟ್ ಖರೀದಿಸಿದ್ದ. ಇದರಲ್ಲಿ ಅವನಿಗೆ ಬರೋಬ್ಬರಿ 287 ಕೋಟಿ ರೂಪಾಯಿ ಸಿಕ್ಕಿದೆ. ಆದರೆ ಲಾಟರಿ ಗೆದ್ದ ರೈತ ತನ್ನ ಹಲ್ಲುಗಳ ಚಿಕಿತ್ಸೆಗೆಂದು ಡೆಂಟಲ್ ವೈದ್ಯರ ಬಳಿ ಹೋಗಿದ್ದು ಚಿಕಿತ್ಸೆಯ ವೇಳೆ ಹೃದಾಯಾಘತಕ್ಕೆ ಒಳಗಾಗಿ ರೈತ ನಿಧನನಾಗಿದ್ದಾನೆ. ತಕ್ಷಣವೇ ರೈತನನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿದೆ. ಆದರೆ ಈ ವೇಳೆ ಸಿಕ್ವೈರಾ ಅಸುನೀಗಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ.
ಸ್ಥಳೀಯ ಕಾನೂನು ನಿರ್ದೇಶನಾಲಯದ ಮುಖ್ಯಸ್ಥ ಎಡಿಸನ್ ಪಿಕ್ ಈ ಒಂದು ಸಾವಿನ ಬಗ್ಗೆ ಇನ್ನೂ ಕೂಡ ಸ್ಪಷ್ಟತೆ ಸಿಕ್ಕಿಲ್ಲ. ಇದು ಸಹಜ ಸಾವೋ ಅಥವಾ ಬೇರೆ ಏನಾದರೂ ಇದರ ಹಿಂದಿದೆಯೋ ಎಂಬುದು ತನಿಖೆಯ ನಂತರ ತಿಳಿಯಬೇಕಿದೆ ಎಂದು ಹೇಳಿದ್ದಾರೆ.ಒಂದು ವೇಳೆ ಇದು ಸಹಜ ಸಾವಲ್ಲದೇ ಏಕಾಏಕಿ ಆರೋಗ್ಯ ಸಮಸ್ಯೆಯಿಂದ ಆಗಿದ್ದೇ ಆದರೆ ಡೆಂಟಲ್ ಕ್ಲಿನಿಕ್ ಸಾವಿನ ಹೊಣೆಯನ್ನು ಹೊರಬೇಕಾಗುತ್ತೆ. ಇದಕ್ಕಾಗಿಯೇ ನಾವು ಮರಣೋತ್ತರ ಪರೀಕ್ಷೆಗಾಗಿ ಕಾಯುತ್ತಿದ್ದೇವೆ. ಅದು ಬಂದ ಮೇಲೆ ಒಂದು ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಹೇಳಿದ್ದಾರೆ.
ಸಿಕ್ವೈರಾ ಅವರ ಮೃತ್ಯು ಲಾಟರಿ ಟಿಕೆಟ್ ಗೆದ್ದ ಕೇವಲ ಒಂದು ವಾರದ ಅಂತರದಲ್ಲಿ ಆಗಿದೆ. ಹೀಗಾಗಿ ಸ್ಥಳೀಯರು ಅವರ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಸ್ಥಳೀಯರೊಬ್ಬರು ಹೇಳುವ ಪ್ರಕಾರ ಆತ ಒಬ್ಬ ತುಂಬಾ ಸರಳ ವ್ಯಕ್ತಿ. ಅವರ ಬದುಕಲ್ಲಿ ಇಂತಹದೊಂದು ಸಮಸ್ಯೆ ಆಗುತ್ತೆ ಅಂತ ಯಾರೂ ಕೂಡ ನಿರೀಕ್ಷಿಸಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬ ಸ್ಥಳೀಯ ಈ ಬಗ್ಗೆ ಮಾತನಾಡಿದ್ದು. ಲಾಟರಿ ಗೆಲ್ಲುವುದು ಎಲ್ಲರ ಕನಸು ಆಗಿರುತ್ತದೆ ಆದ್ರೆ ಈ ವ್ಯಕ್ತಿ ಗೆದ್ದ ಮೇಲೂ ಅದನ್ನು ಅನುಭವಿಸಲು ಆಗದೇ ನಡು ದಾರಿಯಲ್ಲಿ ತೀರಿಹೋಗಿಬಿಟ್ಟಿದ್ದು ನಿಜಕ್ಕೂ ಬೇಸರವಿದೆ ಎಂದಿದ್ದಾರೆ.
ಆ್ಯಂಟೊನಿಯೋ ಬ್ರಜಿಲ್ನಲ್ಲಿಯೇ ಅತ್ಯಂತ ದೊಡ್ಡ ಲಾಟರಿ ಗೇಮ್ ಎಂದು ಖ್ಯಾತಿ ಗಳಿಸಿದ ಮೆಗಾ ಸೇನಾ ಲಾಟರಿ ಸ್ಪರ್ಧೆಯಲ್ಲಿ ಸುಮಾರು 287 ಕೋಟಿ ರೂಪಾಯಿ ಗೆದ್ದಿದ್ದರು. ಇದು ಆ ಲಾಟರಿಯ 10ನೇ ಅತಿ ದೊಡ್ಡ ಪ್ರೈಸ್ ಎಂದು ಕೂಡ ತಿಳಿದು ಬಂದಿದೆ. ಇಷ್ಟೊಂದು ಹಣ ಗೆದ್ದ ಮೇಲೆಯೂ ಅದನ್ನು ಅನುಭವಿಸಲು ಆ್ಯಂಟೊನಿಯೋಗೆ ಸಾಧ್ಯವಾಗಿಲ್ಲ.