ಬೆಂಗಳೂರು:- ನಾಳೆ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ತಿಳಿಸಿದೆ.
ನಿರ್ವಹಣಾ ಕಾರ್ಯದ ಕಾರಣದಿಂದ ನಾಳೆ ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ವಿದ್ಯುತ್ ಕಡಿತಗೊಳಿಸಲಾಗುವುದು ಎಂದು ಬೆಸ್ಕಾಂ ತಿಳಿಸಿದೆ.
ಸೇಂಟ್ ಜಾನ್ ವುಡ್ ಅಪಾರ್ಟ್ಮೆಂಟ್ ಮತ್ತು ಆಸ್ಪತ್ರೆ, ತಾವರೆಕೆರೆ, ಅಕ್ಸೆಂಚರ್, ಒರಾಕಲ್, ಕ್ರೈಸ್ಟ್ ಕಾಲೇಜ್, ಬಿಟಿಎಂ ಲೇಔಟ್, ಮೆಜೆಸ್ಟಿಕ್ ಅಪಾರ್ಟ್ಮೆಂಟ್, ಅಕ್ಸಾ, ಓಯಸಿಸ್ ಭವನ, ಸುದ್ಧಗುಂಟೆ ಪಾಳ್ಯ, ಗುರಪ್ಪನ ಲೇಔಟ್, ವಿಕ್ಟೋರಿಯಾ ಲೇಔಟ್, ಪಾಮ್ ಗ್ರೋವ್ ರಸ್ತೆ, ಬಾಲಾಜಿ ಥಿಯೇಟರ್ ಸೇರಿದಂತೆ ಹಲವೆಡೆ ಪವರ್ ಕಟ್ ಇರಲಿದೆ.
ಉಳಿದಂತೆ ಅಗ್ರಣ್ ವಿವೇಕನಗರ, ಸಣ್ಣೇನಹಳ್ಳಿ, ವೊನ್ನಾರ್, ಆಂಜನೇಯ ದೇವಸ್ಥಾನ ಬೀದಿ, ಕೆಎಸ್ಆರ್ಪಿ ಕ್ವಾರ್ಟರ್ಸ್, ಲಿಂಡೆನ್, ಯಲುಂಗುಂಟೆ ಪಾಳ್ಯ, ಏರ್ ಫೋರ್ಸ್ ರಸ್ತೆ, ರುದ್ರಪ್ಪ ಗಾರ್ಡನ್, ಎಂಜಿ ಗಾರ್ಡನ್, ಆಸ್ಟಿನ್ ಟೌನ್, ನೀಲಸಂದ್ರ, ಬಜಾರ್, ಆರ್ಕೆ ಗಾರ್ಡನ್, ಬೆಂಗಳೂರು ಫರ್ನಿಚರ್, ರೋಸ್ ಗಾರ್ಡನ್, ಓಆರ್ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ
ಮೇಲೆ ತಿಳಿಸಿರುವ ಸ್ಥಳಗಳಲ್ಲಿ ನಿವಾಸಿಗಳು ನಿಗದಿತ ಸಮಯದಲ್ಲಿ ವಿದ್ಯುತ್ ಬಳಕೆಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ಬೆಸ್ಕಾಂ ಮನವಿ ಮಾಡಿದೆ. ನಿರ್ವಹಣಾ ಕಾರ್ಯಗಳನ್ನು ಪೂರ್ಣಗೊಳಿಸಲು ಸಹಕಾರ ನೀಡುವಂತೆ ಬೆಸ್ಕಾಂ ಸಾರ್ವಜನಿಕರಿಗೆ ಮನವಿ ಮಾಡಿದ್ದು, ಭವಿಷ್ಯದಲ್ಲಿ ಸ್ಥಿರ ವಿದ್ಯುತ್ ಪೂರೈಕೆ ಮಾಡಿಕೊಳ್ಳಲು ಸಹಕಾರಿಯಾಗಲಿದೆ ಎಂದು ತಿಳಿಸಿದೆ.