ಕಲಬುರ್ಗಿ:- ರೌಡಿಶೀಟರ್ ಓರ್ವನ ಹತ್ಯೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯೊಬ್ಬನ ಮೇಲೆ ಪೊಲೀಸರು ಗುಂಡು ಹಾರಿಸಿರುವ ಘಟನೆ ನಗರದ ಆಝಾದ್ ಪುರ ರೋಡ್ ಹತ್ತಿರ ನಡೆದಿದೆ.
ಇತ್ತೀಚೆಗೆ ರೌಡಿಶೀಟರ್ ಓರ್ವನನ್ನು ಕೊಂದು ಎಸ್ಕೇಪ್ ಆಗಿದ್ದ ಆರೋಪಿ ಸಯ್ಯದ್ ಕೌಸರ್ ಕಾಲಿಗೆ ಪೊಲೀಸರು ಗುಂಡೇಟು ಹೊಡೆದಿದ್ದಾರೆ.
ಪ್ರಮುಖ ಆರೋಪಿ ಯಾದುಲ್ಲ ಕಾಲೋನಿಯ ನಿವಾಸಿ ಕೌಸರ್ ಬೇಗ್ (40) ಎಂದು ತಿಳಿದುಬಂದಿದೆ,
ವಿವಿ ಪೊಲೀಸ್ ಠಾಣೆಯ ವ್ಯಾಪ್ತಿಯ ಇಬ್ಬರು ಕಾನ್ ಸ್ಟೇಬಲ್ ಸಿಬ್ಬಂದಿ ಆರೋಪಿಯನ್ನು ಬಂಧಿಸಲು ಹೋದಾಗ, ಆರೋಪಿಯು ಪೊಲೀಸರ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾನೆ, ಬಳಿಕ ಅಲ್ಲಿಂದ ಪರಾರಿಯಾ
ಡಿಸೆಂಬರ್ 11 ರಂದು ರೌಡಿ ಶೀಟರ್ ಖಲೀಲ್ ಮರ್ಡರ್ ಮಾಡಿ ಎಸ್ಕೇಪ್ ಆಗಿದ್ದ. ಇಂದು ಖಚಿತ ಮಾಹಿತಿ ಮೇರೆಗೆ ಆರೋಪಿಯನ್ನು ಅರೆಸ್ಟ್ ಮಾಡಲು ಹೋದಾಗ ಪೊಲೀಸರ ಮೇಲೆಯೇ ಹಲ್ಲೆ ಯತ್ನ ನಡೆದಿದೆ. ಹೀಗಾಗಿ ಜೀವರಕ್ಷಣೆಗಾಗಿ ಪೊಲೀಸರು ಕೌಸರ್ ಬಲಗಾಲಿಗೆ ಫೈರಿಂಗ್ ಮಾಡಿದ್ದಾರೆ.
ಗುಲ್ಬರ್ಗಾ ವಿವಿ ಠಾಣೆ ಇನ್ಸ್ಪೆಕ್ಟರ್ ಸುಶೀಲ್ ರಿಂದ ಕಲಬುರಗಿ ಹೊರವಲಯದ ಅಜಾದ್ ಪುರ ಬಳಿ ಫೈರಿಂಗ್ ನಡೆದಿದೆ.
ಈ ಬಗ್ಗೆ ಪೊಲೀಸ್ ಅಯುಕ್ತ ಡಾ.ಶರಣಪ್ಪ ಮಾತನಾಡಿ, ಖಲೀಲ್ ಮರ್ಡರ್ ಕೇಸ್ ನಲ್ಲಿ ಕೌಸರ್ ಮಿರ್ಜಾ ಪ್ರಮುಖ ಆರೋಪಿ ಆಗಿದ್ದ. ಅಷ್ಟೇ ಅಲ್ಲ ಘಟನೆ ಬಳಿಕ ತಪ್ಪಿಸಿಕೊಂಡು ಹೊರ ರಾಜ್ಯದಲ್ಲಿ ಓಡಾಡಿಕೊಂಡಿದ್ದ. ನಿನ್ನೆ ನಮ್ಮ ಪೊಲೀಸರು ಆತನನ್ನು ಅರೆಸ್ಟ್ ಮಾಡಿ ಕರೆತಂದಿದ್ದರು.
ಆದರೆ ಇಂದು ಠಾಣೆಯಿಂದ ತಪ್ಪಿಸಿಕೊಂಡಿದ್ದ. ಈ ವೇಳೆ ನಮ್ಮವರು ಹಿಡಿಯಲು ಹೋದಾಗ ನಮ್ಮ ಮೂರು ಜನ ಪೊಲೀಸರ ಮೇಲೆ ಹಲ್ಲೆ ಮಾಡಿದ್ದ. ಹೀಗಾಗಿ ಪ್ರಾಣ ರಕ್ಷಣೆಗಾಗಿ ನಮ್ಮ ಇನ್ಸ್ಪೆಕ್ಟರ್ ಫೈರಿಂಗ್ ಮಾಡಿದ್ದಾರೆ ಎಂದಿದ್ದಾರೆ.