ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿಗಳು, ಕೇಂದ್ರ ಸರ್ಕಾರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವರು ಹಾಗೂ ಜನತಾದಳ ಜಾತ್ಯತೀತ ಪಕ್ಷದ ರಾಜ್ಯಾಧ್ಯಕ್ಷರಾದ ಎಚ್ ಡಿ. ಕುಮಾರಸ್ವಾಮಿ ಅವರ ಜನ್ಮದಿನದ ನಿಮಿತ್ತವಾಗಿ ಇಂದು ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಜನತಾದಳ (ಜಾತ್ಯತೀತ) ಪಕ್ಷದ ವತಿಯಿಂದ ಹುಬ್ಬಳ್ಳಿ ನಗರದ ಚಿಟಗುಬ್ಬಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಗೂ ಬಾಣಂತಿಯರಿಗೆ ಹಣ್ಣುಹಂಪಲು ಬಿಸ್ಕೆಟ್ ವಿತರಿಸುವ ಮೂಲಕ ವಿಶಿಷ್ಟವಾಗಿ ಜನ್ಮದಿನದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಹಾನಗರ ಜಿಲ್ಲಾ ಅದ್ಯಕ್ಷರಾದ ಗುರುರಾಜ ಹುಣಸಿಮರದ, ಪಕ್ಷದ ಮುಖಂಡರಾದ ನಿಕಟಪೂರ್ವ ಜಿಲ್ಲಾ ಕಾರ್ಯದರ್ಶಿ ನವೀನಕುಮಾರ,ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಬಾಷಾಸಾಬ್ ಮುದಗಲ, ಜಿಲ್ಲಾ ಕಾರ್ಮಿಕ ಘಟಕ ಅದ್ಯಕ್ಷರು ಶ್ರೀಕಾಂತ ತೆಲಗರ, ಕುಂದಗೋಳ ಕ್ಷೇತ್ರದ ಅದ್ಯಕ್ಷರು ಶಂಕರಗೌಡ ದೊಡ್ಡಮನಿ, ಹುಬ್ಬಳ್ಳಿ ಪೂರ್ವ ಕ್ಷೇತ್ರದ ಅದ್ಯಕ್ಷರು ಅಹ್ಮದ್ ಅರಸಿಕೇರಿ,ಪೂರ್ವ ಕ್ಷೇತ್ರದ ಕಾರ್ಯಾಧ್ಯಕ್ಷರು ಶಂಕರ ಪವಾರ್, ಧಾರವಾಡ ಪಶ್ಚಿಮ ಕ್ಷೇತ್ರದ ಕಾರ್ಯಾಧ್ಯಕ್ಷ ದೊಡ್ಡಪ್ಪ ಧರಣಿ, ಜಿಲ್ಲಾ ಎಸ್ ಟಿ ಅದ್ಯಕ್ಷರು ನಾಗರಾಜ್ ಗುಡದರಿ,ಜಿಲ್ಲಾ ಮಹಿಳಾ ಅದ್ಯಕ್ಷರು ಪೂರ್ಣಿಮಾ ಸವದತ್ತಿ, ಹುಬ್ಬಳ್ಳಿ ಪೂರ್ವ ಕ್ಷೇತ್ರದ ಅಲ್ಪಸಂಖ್ಯಾತ ಅದ್ಯಕ್ಷರು ಸಲಿಂ ಜಾಗಿರದಾರ್, ಸೆಂಟ್ರಲ್ ಕ್ಷೇತ್ರದ ಉಪಾಧ್ಯಕ್ಷ ಈಶ್ವರ ತೆಗ್ಗಿ, ಸೆಂಟ್ರಲ್ ಕ್ಷೇತ್ರ ಎಸ್ ಸಿ ಅದ್ಯಕ್ಷರು ಹುಲಗಪ್ಪಾ ಬ್ಯಾಡಗಿ, ಬಸಯ್ಯ ಬಣವಿ, ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ಉಪಸ್ಥಿತರಿದ್ದರು.