ಶಿಡ್ಲಘಟ್ಟ: ನನಗೆ ಯಾವುದೇ ಚುನಾವಣೆಗಳ ಭಯವಿಲ್ಲ. ಯಾಕೆಂದರೆ ಈ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರ ಶಕ್ತಿ ಗೊತ್ತಿದೆ. ನಾನು ಅವರ ಜೊತೆಗಿದ್ದರೆ ಸಾಕು ಎಂತಹ ಚುನಾವಣೆಗಳನ್ನಾದರು ಎದುರಿಸುತ್ತಾರೆ ಎಂದು ಶಾಸಕ ಬಿ ಎನ್ ರವಿಕುಮಾರ್ ಅಭಿಪ್ರಾಯ ಪಟ್ಟರು.
ಅವಧಿ ಮುಗಿದಿದ್ದ ಹಿನ್ನೆಲೆಯಲ್ಲಿ ಹೊಸಪೇಟೆ, ಭಕ್ತರಹಳ್ಳಿ, ಮಳಮಾಚನಹಳ್ಳಿ, ನಾಗಮಂಗಲ ಗ್ರಾ ಪಂ ಗಳಿಗೆ ನಡೆದ ಚುನಾವಣೆಯಲ್ಲಿ ಅತ್ಯಧಿಕ ಸ್ಥಾನಗಳನ್ನು ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಗೆಲ್ಲುವ ಮೂಲಕ ನಾಲ್ಕೂ ಪಂಚಾಯ್ತಿಗಳಲ್ಲಿ ಅಧಿಕಾರ ದಕ್ಕಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಗೆದ್ದಿರುವ ಹಾಗೂ ಸೋತಿರುವ ಜೆಡಿಎಸ್ ಅಭ್ಯರ್ಥಿಗಳಿಗೆ ಶಾಸಕ ಬಿಎನ್ ರವಿಕುಮಾರ್ ಮೇಲೂರಿನ ತಮ್ಮ ಸ್ವ ಗೃಹದಲ್ಲಿ ಅಭಿನಂದನಾ ಸಮಾರಂಭ ಏರ್ಪಡಿಸಿದ್ದರು.
Custard Apple for diabetes: ಡಯಾಬಿಟೀಸ್ ಇರುವವರು ಸೀತಾಫಲ ತಿನ್ನಬಹುದೇ.? ವೈದ್ಯರು ಹೇಳೋದೇನು..?
ಈ ಸಂದರ್ಭದಲ್ಲಿ ಮಾತನಾಡಿದ ಅವರು ಪಕ್ಷ ಸಂಘಟನೆಗೆ ಗ್ರಾಮ ಪಂಚಾಯ್ತಿ ಚುನಾವಣೆಗಳು ಮುಖ್ಯ ಅಡಿಪಾಯವಿದ್ದಂತೆ, ಇಲ್ಲಿ ಗೆಲ್ಲುವ ಮೂಲಕ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು ನೈರ್ಮಲ್ಯ ಮುಂತಾದ ಅವಶ್ಯಕತೆಗಳನ್ನು ಪೂರೈಸಲು ಸಾಧ್ಯವಾಗುತ್ತದೆ ಎಂದರು. ಸೋತಿರುವ ಅಭ್ಯರ್ಥಿಗಳು ದೃತಿ ಗೆಡುವ ಅವಶ್ಯಕತೆ ಇಲ್ಲ ಮುಂದಿನ ದಿನಗಳಲ್ಲಿ ಅವರಿಗೂ ಅಧಿಕಾರ ಕೊಡುವ ಜವಾಬ್ದಾರಿ ನನ್ನ ಮೇಲಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಲಕ್ಷ್ಮಿನಾರಾಯಣರೆಡ್ಡಿ, ಮಾತನಾಡಿ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಕಿಲ್ ಕುಮಾರಸ್ವಾಮಿ ಸೋಲಿನಿಂದಾಗಿ ಪಕ್ಷಕ್ಕೆ ಹಿನ್ನಡೆ ಆಗಿದೆ ಎಂಬ ಮಾತುಗಳು ಕೇಳಿ ಬಂದಿದ್ದವು, ಆದರೆ ತಾಲ್ಲೂಕಿನ ನಾಲ್ಕು ಗ್ರಾಮ ಪಂಚಾಯತಿಗಳು ಗೆಲ್ಲುವ ಮೂಲಕ ಕ್ಷೇತ್ರದ ಜನ, ರಾಜ್ಯಾಧ್ಯಂತ ಮೊತ್ತೊಮ್ಮೆ ಪಕ್ಷ ಸಂಘಟನೆಗೆ ಮುನ್ನುಡಿ ಬರೆದಿದ್ದಾರೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಮುನಿಯಪ್ಪ, ಮುಖಂಡರಾದ ಹುಜುಗೂರು ರಾಮಣ್ಣ, ಶಿವಾರೆಡ್ಡಿ, ಭಕ್ತರಹಳ್ಳಿ ರಮೇಶ್ ಇನ್ನಿತರರು ಉಪಸ್ಥಿತರಿದ್ದರು.