ಬೆಂಗಳೂರು: ಶಿವಾಜಿನಗರದ ಮೊಬೈಲ್ ಅಂಗಡಿಯೊಂದರಲ್ಲಿ ಕಳ್ಳರು ಕೈ ಚಳಕ ತೋರಿದ್ದಾರೆ. ಮುಖಕ್ಕೆ ಮಾಸ್ಕ್ ತಲೆಗೆ ಹ್ಯಾಟ್ , ಕೈಗೆ ಗ್ಲೋಸ್ ಹಾಕೊಂಡು ಶೆಟರ್ ಮುರಿದು ಎಂಟ್ರಿ ಕೊಟ್ಟಿರೋ ಈ ಗ್ಯಾಂಗ್ ಇಡೀ ಮೊಬೈಲ್ ಅಂಗಡಿಯನ್ನ ದೋಚಿದೆ.
ಮೊಬೈಲ್ ಟಾರ್ಚ್ ಹಾಕಿಕೊಂಡು ಚೀಲ ತಂದು ಇಡೀ ಮೊಬೈಲ್ ಅಂಗಡಿ ದೋಚಿದ್ದಾರೆ. ಸುಮಾರು 2 ಲಕ್ಷ ರೂಪಾಯಿ ನಗದು ಹಾಗೂ ಲಕ್ಷಾಂತರ ಮೌಲ್ಯದ 55 ಮೊಬೈಲ್ ಫೋನ್ ದೋಚಿರೋ ಘಟನೆ ಶಿವಾಜಿನಗರದ ವಿಶ್ವಾಸ್ ಕಮ್ಯೂನಿಕೇಷನ್ ಅಂಗಡಿಯಲ್ಲಿ ನಡೆದಿದೆ.
Custard Apple for diabetes: ಡಯಾಬಿಟೀಸ್ ಇರುವವರು ಸೀತಾಫಲ ತಿನ್ನಬಹುದೇ.? ವೈದ್ಯರು ಹೇಳೋದೇನು..?
ಅಂಗಡಿ ದೋಚುವ ದೃಶ್ಯ ಸಿಸಿ ಟಿವಿ ಕ್ಯಾಮೆರದಲ್ಲಿ ಸೆರೆಯಾಗಿದೆ. ಶೆಟರ್ ಮುರಿದು ಒಳಗೆ ನುಗ್ಗಿದ ಇಬ್ಬರು ಮಾಸ್ಕ್ ಧರಿಸಿದ ವ್ಯಕ್ತಿಗಳಿಂದ ಡಿಸೆಂಬರ್ 11ರ ಬೆಳಗಿನ ಜಾವ 3.25ರ ಸುಮಾರಿಗೆ ಘಟನೆ ನಡೆದಿದೆ.
ಅಂಗಡಿಯಲ್ಲಿದ್ದ ಸುಮಾರು 55 ಮೊಬೈಲ್ ಫೋನ್ ಚೀಲಕ್ಕೆ ತುಂಬಿಕೊಂಡಿದ್ದಾರೆ. ಶೋರೂಂನಲ್ಲಿದ್ದ ಎಲ್ಲಾ ಹೊಸ ಮೊಬೈಲ್ ಗಳನ್ನ ಚೀಲಕ್ಕೆ ತುಂಬಿಕೊಂಡ ಖದೀಮರು ಬಳಿಕ ಡ್ರಾನಲ್ಲಿ ಇಟ್ಟಿದ್ದ ಎರಡು ಲಕ್ಷ ಹಣ ದೋಚಿ ಪರಾರಿಯಾಗಿದ್ದಾರೆ.ಈ ಬಗ್ಗೆ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಮೇಲೆ ಎಫ್.ಐ.ಆರ್ ದಾಖಲಾಗಿದೆ.