ಚಿಕ್ಕಮಗಳೂರು:- ಇಲ್ಲಿನ ಬಾಳೆಹೊನ್ನೂರಿನ ರಂಭಾಪುರಿ ಮಠಕ್ಕೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹಾಗೂ ಪತಿ ರಾಜ್ ಕುಂದ್ರಾ ಆನೆ ಕೊಡುಗೆ ನೀಡಿದ್ದಾರೆ. ರೋಬೋಟಿಕ್ ಆನೆ ನೋಡಲು ರಂಭಾಪುರಿ ಮಠಕ್ಕೆ ಜನ ಸಾಗರವೇ ಹರಿದು ಬರ್ತಿದೆ.
ಭಾರತಕ್ಕೆ `ಪರಮಾಪ್ತ ರಾಷ್ಟ್ರ’ ಸ್ಥಾನಮಾನ ಅಮಾನತುಗೊಳಿಸಿದ ಸ್ವಿಝರ್ಲ್ಯಾಂಡ್ ಸರ್ಕಾರ
ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ಮಠಕ್ಕೆ ರೋಬೋಟಿಕ್ ಆನೆ ಬಂದಿದ್ದು, ಇದನ್ನು ಇಂದು ರಂಭಾಪುರಿ ಶ್ರೀ ಡಾ: ವೀರ ಸೋಮೇಶ್ವರ ಸ್ವಾಮೀಜಿ ಅನಾವರಣ ಮಾಡಿದರು.
ಇದು ರೋಬೋಟಿಕ್ ಆನೆಯಾಗಿದ್ದು, ನೋಡುವುದಕ್ಕೆ ಯಥಾವತ್ತಾಗಿ ರಿಯಲ್ ಆನೆಯಂತೆಯೇ ಕಾಣಿಸುತ್ತದೆ. ಸದಾ ಕಿವಿ, ತಲೆ, ಸೊಂಡಿಲು ಹಾಗೂ ಬಾಲವನ್ನ ಅಲುಗಾಡಿಸುತ್ತಿರುತ್ತದೆ. ನೋಡಲು ದೈತ್ಯ ಗಾತ್ರದಾಗಿದ್ದು, ಸದಾ ಆಕ್ಟೀವ್ ಆಗಿರುವ ಈ ಆನೆಯನ್ನು ನೋಡಿದವರಿಗೆ ಜೀವಂತ ಆನೆಯೇ ಇಲ್ಲಿ ನಿಂತುಕೊಂಡಿದೆ ಎಂಬಂತೆ ಭಾಸವಾಗಿತ್ತದೆ.
ದೇಶದ ಪಂಚಪೀಠಗಳಲ್ಲೇ ಮೊದಲ ಪೀಠವಾದ ರಂಭಾಪುರಿ ಮಠವು ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ಇದ್ದು, ಈ ಮಠದ ಭಕ್ತರಾಗಿರುವ ಬಾಲವುಡ್ ನಟಿ ಶಿಲ್ಪಾ ಶೆಟ್ಟಿ ದಂಪತಿ ಆಗಾಗ ಮಠಕ್ಕೆ ಬಂದು ಹೋಗುತ್ತಾರೆ.