ಯೂನಿವರ್ಸ್ ಬಾಸ್ ಕ್ರಿಸ್ ಗೇಲ್ ಅವರ ವಿಶ್ವ ದಾಖಲೆಯನ್ನು ಪಾಕಿಸ್ತಾನ್ ತಂಡದ ಸ್ಟಾರ್ ಆಟಗಾರ ಬಾಬರ್ ಆಝಂ ಅವರು ಮುರಿದಿದ್ದಾರೆ.
ಲಿವ್-ಇನ್ ಸಂಗಾತಿಯ ಕೊಂಕು ಮಾತು: ಮನನೊಂದು ಸಾವಿನ ಹಾದಿ ಹಿಡಿದ ಟೆಕ್ಕಿ!
ಸೆಂಚುರಿಯನ್ನಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ 2ನೇ ಟಿ20 ಪಂದ್ಯದ ಮೂಲಕ ಪಾಕಿಸ್ತಾನ್ ಬ್ಯಾಟರ್ ಬಾಬರ್ ಆಝಂ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಪಂದ್ಯದಲ್ಲಿ ಬಾಬರ್ ಆಝಂ 20 ಎಸೆತಗಳಲ್ಲಿ 1 ಸಿಕ್ಸ್ 3 ಫೋರ್ಗಳೊಂದಿಗೆ 31 ರನ್ ಬಾರಿಸಿದ್ದರು. ಈ ಮೂವತ್ತು ರನ್ಗಳೊಂದಿಗೆ ಬಾಬರ್ ಆಝಂ ಟಿ20 ಕ್ರಿಕೆಟ್ನಲ್ಲಿ 11 ಸಾವಿರ ರನ್ ಪೂರೈಸಿದ್ದಾರೆ. ಅದು ಕೂಡ 300 ಕ್ಕಿಂತ ಕಡಿಮೆ ಇನಿಂಗ್ಸ್ಗಳಲ್ಲಿ ಎಂಬುವುದು ವಿಶೇಷ.
ಟಿ20 ಕ್ರಿಕೆಟ್ ಇತಿಹಾಸದಲ್ಲಿ 300 ಕ್ಕಿಂತ ಕಡಿಮೆ ಇನಿಂಗ್ಸ್ನಲ್ಲಿ 11 ಸಾವಿರ ರನ್ ಪೂರೈಸಿದ ವಿಶ್ವದ ಮೊದಲ ಬ್ಯಾಟರ್ ಎಂಬ ವಿಶ್ವ ದಾಖಲೆ ಇದೀಗ ಬಾಬರ್ ಆಝಂ ಪಾಲಾಗಿದೆ. ಹಾಗೆಯೇ ಅತೀ ವೇಗವಾಗಿ 11 ಸಾವಿರ ರನ್ ಕಲೆಹಾಕಿದ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.