ಲಿವ್-ಇನ್ ಸಂಗಾತಿಯ ಕೊಂಕು ಮಾತಿನಿಂದ ಬೇಸತ್ತು ಟೆಕ್ಕಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಚಳಿಗಾಲದಲ್ಲಿ ಹೆಚ್ಚಾಗಿ ಬಾಳೆಹಣ್ಣು ತಿಂತಿದ್ದೀರಾ? ಹಾಗಿದ್ರೆ ಮಿಸ್ ಮಾಡ್ದೆ ಸುದ್ದಿ ನೋಡಿ!
ಮಯಾಂಕ್ ಚಂದೇಲ್ ಎಂದು ಗುರುತಿಸಲಾದ ಮೃತ ಇಂಜಿನಿಯರ್ಗೆ ಕೆಲಸವಿಲ್ಲದ ಕಾರಣ ಮಾನಸಿಕ ಒತ್ತಡದಲ್ಲಿದ್ದರು, ಜತೆಗೆ ತನ್ನ ಸಂಗಾತಿಯ ಕುಹಕ ಮಾತುಗಳನ್ನು ಕೇಳಿ ಮತ್ತಷ್ಟು ಡಿಪ್ರೆಶನ್ಗೆ ಹೋಗಿದ್ದರು. ಉತ್ತರ ಪ್ರದೇಶದ ಜಲಾಲಾಬಾದ್ನವರಾದ ಚಂದೇಲ್, ಬಂಡಾ ಮೂಲದ ಮಹಿಳೆಯೊಂದಿಗೆ ಸುಮಾರು ಏಳು ವರ್ಷಗಳಿಂದ ಸಂಬಂಧ ಹೊಂದಿದ್ದರು. ನೋಯ್ಡಾದ ಸೆಕ್ಟರ್ 73 ರಲ್ಲಿ ನಾಲ್ಕು ವರ್ಷಗಳಿಂದ ಲಿವ್ ಇನ್ ರಿಲೇಷನ್ಶಿಪ್ನಲ್ಲಿದ್ದರು.
ಡೆತ್ನೋಟ್ನಲ್ಲಿ ಏನೂ ಕೆಲಸವಿಲ್ಲ, ಇಡೀ ದಿನ ಮನೆಯಲ್ಲಿ ಕೂತು ತಿನ್ನೋದೊಂದೇ ಕೆಲಸ ಎನ್ನುವ ಮಾತು ತೀರಾ ಮನಸ್ಸು ಹಾಳುಮಾಡಿತ್ತು. ಈ ಎಲ್ಲಾ ಕಾರಣಗಳಿಂದಾಗಿ ತಾನು ಸಾಯುವ ನಿರ್ಧಾರ ಮಾಡಿದ್ದೇನೆ ಎಂದು ಬರೆದಿದ್ದರು. ಶುಕ್ರವಾರ ಸಂಜೆ ಕೆಲಸ ಮುಗಿಸಿ ಬಂದ ಬಳಿಕ ಆಕೆಗೆ ಮಯಾಂಕ್ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ.