ಬೆಳಗಾವಿ:- ಬೆಳಗಾವಿಯಲ್ಲೊಂದು ಅಮಾನವೀಯ ಘಟನೆ ಒಂದು ನಡೆದಿದ್ದು, 3 ತಿಂಗಳ ಹಸುಗೂಸನ್ನೇ ಪಾಪಿ ತಾಜಯೋರ್ವ ಕೆರೆಗೆ ಎಸೆದ ಘಟನೆ ಜರುಗಿದೆ.
ಆಂಧ್ರದಲ್ಲಿ ವಿಚಿತ್ರ ಘಟನೆ: ನಿದ್ರೆಯಲ್ಲಿ ಹಲ್ಲಿನ ಸೆಟ್ ನುಂಗಿದ ವ್ಯಕ್ತಿ!
ಹೆತ್ತ ಮೂರು ತಿಂಗಳ ಗಂಡು ಮಗು ಹಸುಗೂಸನ್ನೇ ಕೆರೆಗೆ ಎಸೆದು ಪಾಪಿ ತಾಯಿ ಅಮಾನವೀಯ ನಡೆ ತೋರಿಸಿದ್ದಾಳೆ. ಬೆಳಗಾವಿಯ ಕನಬರಗಿ ನಲ್ಲಿ ಘಟನೆ ಜರುಗಿದೆ.
ಮಗು ಕೆರೆಗೆ ಎಸೆಯುವುದನ್ನ ಸ್ಥಳೀಯರು ನೋಡಿದ್ದಾರೆ. ದನ ಕರು ತೊಳೆಯಲು ಹೋದಾಗ ಯುವಕರ ಕಣ್ಣಿಗೆ ದೃಷ್ಯ ಕಂಡು ಬಂದಿದೆ. ತಕ್ಷಣ ಕೆರೆಗೆ ಹಾರಿ ಮಗು ರಕ್ಷಣೆ ಮಾಡಲಾಗಿದೆ.
3 ತಿಂಗಳ ಹಸುಗೂಸನ್ನ ಕೊಲ್ಲೋಕೆ ಪಾಪಿ ತಾಯಿ ಪ್ಲಾನ್ ಮಾಡಿದ್ದಾಳೆ. ಮಗು ಎಸೆದು ಓಡಿ ಹೋಗುತ್ತಿದ್ದ ತಾಯಿಯನ್ನು ತಡೆದು ಬುದ್ದಿ ಹೇಳಿ ಮಗುವನ್ನು ಯುವಕರು ರಕ್ಷಣೆ ಮಾಡಿ ಅವಳ ಕೈಗೆ ನೀಡಿದ್ದಾರೆ.
ಬೆಳಗಾವಿ ಚಿಕ್ಕಮಕ್ಕಳ ಖಾಸಗಿ ಆಸ್ಪತ್ರೆ ಗೆ ದಾಖಲು ಮಾಡಲಾಗಿದೆ.
ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.