ಬೆಂಗಳೂರು:- BMTC ಬಸ್ ನ ಚಾಲಕ ಹಾಗೂ ಕಂಡಕ್ಟರ್ ಬಗ್ಗೆ ಏನ್ ಹೇಳೋದು ಮರ್ರೆ. ಇವರದ್ದು ದಿನಕ್ಕೊಂದು ಕಿರಿಕ್ ಗಳು ಇದ್ದೇ ಇರುತ್ತೆ.
ನಗರದಲ್ಲಿ ಚಾಲಕನ ನಿರ್ಲಕ್ಷ್ಯಕ್ಕೆ ಎಷ್ಟೋ ಜೀವಗಳು ಬಲಿ ಆಗಿದೆ. ಎಷ್ಟೋ ಜನರು ಗಂಭೀರ ಗಾಯಗೊಂಡಿದ್ದಾರೆ. ಇಷ್ಟೆಲ್ಲಾ ಅವಾಂತರ ಮಾಡಿಯೂ ಚಾಲಕರ ನಿರ್ಲಕ್ಷ್ಯ ಮಾತ್ರ ಕಮ್ಮಿ ಆಗಿಲ್ಲ.
ಹೌದು, ಈ ವಿಡಿಯೋ ನೋಡಿದ್ರೆ ಜನರ ಪ್ರಾಣ ಅಂದ್ರೆ ಬಿಎಂಟಿಸಿಗೆ ಇಷ್ಟು ಕೇವಲ ಆಗೋಯ್ತಾ? ಎಂಬ ಪ್ರಶ್ನೆ ಮೂಡದೇ ಇರದು. ಸವಾರ ಬದುಕುಳಿದಿದ್ದೇ ಅದೃಷ್ಟ, ಬಿಎಂಟಿಸಿ ಚಾಲಕನ ನಿರ್ಲಕ್ಷ್ಯದ ಆರೋಪ ಎದ್ದು ಕಾಣುತ್ತಿದೆ.
ಬಿಎಂಟಿಸಿ ಬಸ್ ನಿಂದ ಮತ್ತೊಂದು ಆ್ಯಕ್ಸಿಡೆಂಟ್ ನಡೆದಿದ್ದು, ದ್ವಿಚಕ್ರ ವಾಹನ ಸವಾರನನ್ನ ಕೆಳಗೆ ಬೀಳಿಸಿ ಚಾಲಕ ಜೂಟ್ ಆಗಿದ್ದಾನೆ. ತನ್ನ ಪಾಡಿಗೆ ದ್ವಿಚಕ್ರ ವಾಹನ ಸವಾರ ಸಂಚಾರ ಮಾಡ್ತಿದ್ದ.
ಈ ವೇಳೆ ನಿಧಾನವಾಗಿ ಬಲಭಾಗಕ್ಕೆ ಬಿಎಂಟಿಸಿ ಬಸ್ ಬಂದಿದೆ. ಈ ವೇಳೆ ದ್ವಿಚಕ್ರ ವಾಹನಕ್ಕೆ ಟಚ್ ಆಗಿ ಸವಾರ ಕೆಳಗಡೆ ಬಿದ್ದಿದ್ದಾನೆ.
ಜಸ್ಟ್ ಯಾಮಾರಿದ್ರೂ ಸವಾರನ ತಲೆ ಮೇಲೆ ಬಸ್ ನ ಚಕ್ರ ಹರಿಯುತ್ತಿತ್ತು. ಶುಕ್ರವಾರ ಸಂಜೆ 6.10ಕ್ಕೆ ನಡೆದಿರುವ ಘಟನೆ ಜರುಗಿದೆ.
ನಗರದ ಹಲಸೂರು ಗೇಟ್ ಸ್ಟೇಷನ್ ಬಳಿ ಘಟನೆ ಜರುಗಿದ್ದು, ಸವಾರ ಕೆಳಗಡೆ ಬಿದ್ರೂ ಚಾಲಕ ಕೇರ್ ಮಾಡಿಲ್ಲ.
ಇನ್ನೂ ಬಿಎಂಟಿಸಿ ಚಾಲಕನ ಈ ನಡೆಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ.