ಒಡಿಶಾ:- ಸಾಲೇಪುರ ಪ್ರದೇಶದ ರೈಸುಂಗುಡಾದಲ್ಲಿ ನಾಟಕ ಪ್ರದರ್ಶನ ವೇಳೆ ಕಬ್ಬಿಣದ ಗೇಟ್ ಕುಸಿದುಬಿದ್ದು 30 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜರುಗಿದೆ.
ಗಾಯಾಳುಗಳನ್ನು ಸಲೇಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಕಟಕ್ನ ಎಸ್ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಅವರು ಹೇಳಿದರು.
ರಾಜಾ ರಾಣಿ ಜಾತ್ರೆ ತಂಡವು ಶುಕ್ರವಾರದಿಂದ ರಾಯಸುಂಗುಡದಲ್ಲಿ ಪ್ರದರ್ಶನ ನೀಡುತ್ತಿದೆ. ಶನಿವಾರ ರಾತ್ರಿ ಸೆಕೆಂಡ್ ಶೋ ಆರಂಭವಾಗುವ ಮುನ್ನವೇ ಈ ದುರ್ಘಟನೆ ನಡೆದಿದೆ. ಎತ್ತರದ ಕಬ್ಬಿಣದ ದ್ವಾರದ ಮೂಲಕ ಪ್ರೇಕ್ಷಕರು ಜಾತ್ರಾ ಆವರಣ ಪ್ರವೇಶಿಸುತ್ತಿದ್ದಂತೆಯೇ ಗೇಟ್ ಕುಸಿದು ಬಿದ್ದಿದೆ.