ಸ್ಯಾಂಡಲ್ ವುಡ್ ನಟ ಡಾಲಿ ಧನಂಜಯ್ ಸದ್ಯದಲ್ಲೇ ಮದುವೆಯಾಗಲಿದ್ದಾರೆ. ಇತ್ತೀಚೆಗಷ್ಟೇ ಸಿಂಪಲ್ ಆಗಿ ಎಂಗೇಜ್ ಮೆಂಟ್ ಮಾಡಿಕೊಂಡಿದ್ದ ಡಾಲಿಯ ಮದುವೆ ಪತ್ರಿಕೆ ರೆಡಿಯಾಗಿದೆ.
ಇಂದು ಮುಂಜಾನೆ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಮದುವೆಯ ಲಗ್ನ ಪತ್ರಿಕೆ ಹಂಚಿಕೊಂಡಿದ್ದ ಡಾಲಿ ಧನಂಜಯ್ ಇದೀಗ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಲಗ್ನ ಪತ್ರಿಕೆ ನೀಡಿ ಮದುವೆಗೆ ಆಹ್ವಾನಿಸಿದ್ದಾರೆ.
ಭಾವಿ ಪತ್ನಿ ಧನ್ಯತಾ ಜೊತೆ ಹೋಗಿ ಸಿಎಂ ಅವರನ್ನು ಡಾಲಿ ಧನಂಜಯ್ ಮದುವೆಗೆ ಆಹ್ವಾನಿಸಿದ್ದಾರೆ. ಮುಂದಿನ ವರ್ಷ ಫೆಬ್ರವರಿ 15-16 ಕ್ಕೆ ಡಾಲಿ ಧನ್ಯತಾ ಮದುವೆ ಇದ್ದು ಮೈಸೂರಿನಲ್ಲಿ ಅದ್ದೂರಿಯಾಗಿ ಮದುವೆ ನಡೆಯಲಿದೆ.
ಡಾಲಿ ಮದುವೆ ಆಮಂತ್ರಣ ಫೊಟೋ ಶೇರ್ ಮಾಡುತ್ತಿದ್ದಂತೆ ನೆಟ್ಟಿಗರು ಫಿದಾ ಆಗಿದ್ದಾರೆ. ನಟನಿಗೆ ಕಮೆಂಟ್ ಮೂಲಕ ಶುಭಾಶಯ ತಿಳಿಸುತ್ತಿದ್ದಾರೆ. ಪ್ರೀತಿಯ ಬಂಧು ಮಿತ್ರರೇ, ನಿಮ್ಮ ಪ್ರೀತಿಯ ಧನಂಜಯ ಹಾಗೂ ಧನ್ಯತ ಮಾಡುವ ನಮಸ್ಕಾರಗಳು. ನಾವು ಖುಷಿಯಾಗಿದ್ದೇವೆ. ನಮ್ಮ ವಿಷಯ ತಿಳಿದು ನೀವು ಸಂಭ್ರಮಿಸಿದ್ದು ನಮ್ಮ ಖುಷಿಯನ್ನು ಇಮ್ಮಡಿಗೊಳಿಸಿದೆ. ನಮ್ಮ ಮದುವೆ ಸಂಭ್ರಮವನ್ನು ನಿಮ್ಮೆಲ್ಲರ ಜೊತೆಗೂಡಿ ಆಚರಿಸಬೇಕು ಎಂಬ ಮಹದಾಸೆಯಿಂದ ಈ ಪತ್ರ ಬರೆಯುತ್ತಿದ್ದೇವೆ.
ತಾವು ಎಲ್ಲಿದ್ದರೂ ಜಗದ ಯಾವ ಮೂಲೆಯಲ್ಲಿದ್ದರೂ ಕುಟುಂಬ ಸಮೇತರಾಗಿ ಬಂದು ನಮ್ಮ ಸಮಾಗಮಕ್ಕೆ ನೀವು ಆಶೀರ್ವಾದ ಮಾಡಬೇಕು. ಪ್ರೇಮದ ಭರವಸೆಯೇ ಬಾಳಿನ ಬೆಳಕು. ನಮ್ಮ ಪ್ರೀತಿ ದೀಪದ ಪ್ರಕಾಶಕ್ಕೆ ಸಾಕ್ಷಿಯಾಗಬೇಕು ಎಂಬುದು ನಮ್ಮ ಆಶಯ. ಮತ್ತೆಲ್ಲಾ ಕ್ಷೇಮವಷ್ಟೇ.. ನಿಮ್ಮನ್ನು ಸ್ವಾಗತಿಸುವ ನಿರೀಕ್ಷೆಯಲ್ಲಿ ಧನಂಜಯ-ಧನ್ಯತ ಎಂದು ಲಗ್ನ ಪತ್ರಿಕೆಯಲ್ಲಿ ಬರೆಯಲಾಗಿದೆ.
ಧನತ್ಯಾ ಹಾಗೂ ಡಾಲಿ ಧನಂಜಯ್ ಸಿಂಪಲ್ ಆಗಿ ಇತ್ತೀಚೆಗೆ ಸುಂದರವಾಗಿಯೇ ಒಂದು ಎಂಗೇಜ್ಮೆಂಟ್ ಮಾಡಿಕೊಂಡಿದ್ದರು. ಇದರ ಫೋಟೋಗಳು ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿಯೇ ಹೆಚ್ಚು ಗಮನ ಸೆಳೆಯುತ್ತಿವೆ.
ಡಾಲಿ ಧನಂಜಯ್ ಹಾಗೂ ಧನ್ಯತಾ ನಿಶ್ಚಿತಾರ್ಥ ಶಾಸ್ತ್ರದ ಸಂಭ್ರಮ ಅರಸಿಕೆರೆಯಲ್ಲಿಯೇ ನಡೆದಿದೆ. ಡಾಲಿ ಧನಂಜಯ್ ಅವರ ಕಾಳೇನಹಳ್ಳಿಯ ಮನೆಯಲ್ಲಿಯೇ ಈ ಎಲ್ಲ ಶಾಸ್ತ್ರಗಳು ನಡೆಯತ್ತಿವೆ. ಡಾಲಿ ಧನಂಜಯ್ ಹಾಗೂ ಧನತ್ಯಾ ಲಗ್ನಪತ್ರಿಕೆ ಬರೆಸೋ ಶಾಸ್ತ್ರ ಮಾಡಲಾಗಿದೆ.