ಬೆಂಗಳೂರು:- ಕೆಪಿಟಿಸಿಎಲ್ ವತಿಯಿಂದ ತುರ್ತ ನಿರ್ವಹಣಾ ಕಾಮಗಾರಿ ಹಿನ್ನೆಲೆ ರಾಜಧಾನಿ ಬೆಂಗಳೂರಿನ ಹಲವು ಏರಿಯಾದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಅದರಂತೆ ಸಿಲಿಕಾನ್ ಸಿಟಿ ಬೆಂಗಳೂರಿನ ದೀಪಾಂಜಲಿ ನಗರ, ಪಟೇಲ್ ಪುಟ್ಟಯ್ಯ ಕೈಗಾರಿಕಾ ಪ್ರದೇಶ, ಬಿಎಸ್ಇಎಲ್, ಮುತ್ತಾಚಾರಿ ಅಜಿತ್ ಸೇಠ್ ಕೈಗಾರಿಕಾ ಪ್ರದೇಶ, ವಿನಾಯಕ ಲೇಔಟ್, ಮೆಟ್ರೋ ಲೇಔಟ್, ನಾಯಂಡನಹಳ್ಳಿ, ಬ್ಯಾಟರಾಯನ ಪುರದ ಮೈಸೂರು ರಸ್ತೆ, ಶೋಭಾ ಟೆಂಟ್ ರೋಡ್, ಗುಡ್ಡದಹಳ್ಳಿ, ಎಕ್ಸ್ ಟೆನ್ಷನ್, ಗ್ಲೋಬಲ್ ವಿಲೇಜ್ ಟೆಕ್ ಪಾರ್ಕ್, ಆರ್ ಆರ್ ನಗರ.
ಬಾಪೂಜಿ ನರ, ಕವಿತಾ ಲೇಔಟ್, ರಂಗನಾಥ ಕಾಲೋನಿ, ಬ್ಯಾಟರಾಯನಪುರ, ಐಯ್ಯಣ್ಣಶೆಟ್ಟಿ ಲೇಔಟ್, ಗಣಪತಿ ನಗರ, ಕವಿಕಾ ಲೇಔಟ್, ರಂಗನಾಥ ಕಾಲೋನಿ, ಬ್ಯಾಟರಾಯನಪುರ, ಐಯ್ಯಣ್ಣಶೆಟ್ಟಿ ಲೇಔಟ್, ಗಣಪತಿನಗರ, ಪ್ರೈಡ್ ಅಪಾರ್ಟ್ಮೆಂಟ್ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಬೆಂಗಳೂರು ಮಾತ್ರವಲ್ಲದೆ, ತುಮಕೂರು ನಗರದ ಉಪ ವಿಭಾಗ-2ರ ಸರಸ್ವತಿಪುರಂ ಶಾಖಾ ವ್ಯಾಪ್ತಿಯಲ್ಲಿ ಮೆಳೆಕೋಟೆ ಗ್ರಾಮದಲ್ಲಿ ದುರಸ್ತಿ ಕಾರ್ಯ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ.
ದಿಬ್ಬೂರು, ಬಿಜಿ ಪಾಳ್ಯ ಸರ್ಕಲ್, ಗುಬ್ಬಿಗೇಟ್, ಕಾಲ್ ಟೆಕ್ಸ್ ಸರ್ಕಲ್, ಕುಂಟಮ್ಮನ ತೋಟ, ಗುಬ್ಬಿಗೇಟ್ ರಿಂಗ್ ರಸ್ತೆ, ಪಿಜಿ ಲೇಔಟ್, ವಿನೋಬ ನಗರ, ಹೆಗ್ಗಡೆ ಕಾಲೋನಿ, ಜಯಪುರ, ಹೌಸಿಂಗ್ ಬೋರ್ಡ್, ಕುರಿಪಾಳ್ಯ, ಟೂಡಾ ಲೇ ಔಟ್, ನೈಪ್ ಪ್ಲಾಲೇಸ್ ರಿಂಗ್ ರಸ್ತೆ ಬಲ ಭಾಗ, ಗಂಗಸಂದ್ರ, ಮೆಳೆಕೋಟೆ, ಶೇಷಾದ್ರಿಪುರಂ ಕಾಲೇಜು, ಮಯೂರನಗರ, ರಾಜೀವ್ ಗಾಂಧಿ ನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಬೆಸ್ಕಾಂ ತಿಳಿಸಿದೆ.