ಮನುಷ್ಯನ ದೇಹದ ತೂಕ ಒಮ್ಮೆ ಅವನ ನಿಯಂತ್ರಣ ಮೀರಿ ಹೆಚ್ಚಾಯಿತೆಂದರೆ ಅದನ್ನು ಹತೋಟಿಗೆ ತರಲು ಮತ್ತು ದೈಹಿಕ ಸ್ಥಿತಿ ಮೊದಲಿನಂತಾಗಲು ಇನ್ನಿಲ್ಲದ ಹರಸಾಹಸ ಪಡಬೇಕಾಗುತ್ತದೆ. ಹಲವು ಬಗೆಯ ವ್ಯಾಯಾಮಗಳು, ಆಹಾರ ಪದ್ಧತಿಯಲ್ಲಿ ಬದಲಾವಣೆಗಳು ಜೊತೆಗೆ ತನ್ನ ಜೀವನಶೈಲಿಯಲ್ಲಿನ ಊಹೆಗೂ ಮೀರಿದ ಬದಲಾವಣೆಗೆ ಮೊರೆ ಹೋಗಬೇಕಾಗುತ್ತದೆ.
ದಿನವಿಡೀ ನೀವು ಏನೂ ಸೇವನೆ ಮಾಡದೇ ರಾತ್ರಿ ಒಮ್ಮೆಲೇ ಹೆಚ್ಚು ಆಹಾರ ಸೇವನೆ ಮಾಡದರೆ ಅದು ನಿಮ್ಮ ಜೀರ್ಣಕ್ರಿಯೆ ಮತ್ತು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನೀವು ಅತಿಯಾಗಿ ಒಂದೇ ಸಮಯದಲ್ಲಿ ತಿನ್ನುವ ಪ್ರಕ್ರಿಯೆ ನಿಮ್ಮ ತೂಕವು ಕಡಿಮೆಯಾಗುವ ಬದಲು ಹೆಚ್ಚಾಗುವಂತೆ ಮಾಡುತ್ತದೆ.
ತೂಕ ಇಳಿಕೆಗೆ ಕೆಲವು ಬದಲಾವಣೆಗಳು
ಉಪವಾಸದ ವೇಳೆ ನಿಮ್ಮ ವೇಳಾಪಟ್ಟಿಯಲ್ಲಿ ನೀವು ಮಾಡಿಕೊಳ್ಳುವ ಕೆಲವು ಬದಲಾವಣೆಗಳು ದೇಹದ ಮೇಲೆ ಪರಿಣಾಮ ಬೀರುತ್ತವೆ. ಹಸಿವು ತಪ್ಪಿಸಲು ನೀವು ಸಾಕಷ್ಟು ನಿದ್ರೆ ಮಾಡಲಾಗದೇ ಹೋದರೆ ಅದು ನಿಮ್ಮ ಹೆಚ್ಚಿನ ಕ್ಯಾಲೊರಿ ಬರ್ನ್ ಮಾಡಲ್ಲ.
ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಹೇಳುವ ಪ್ರಕಾರ ಉಪವಾಸದ ಸಮಯದಲ್ಲಿ ನೀವು ಹೆಚ್ಚು ನಿದ್ದೆ ಮಾಡಿದರೆ ಅದು ನಿಮ್ಮ ಹಸಿವಿನ ಹಾರ್ಮೋನುಗಳನ್ನು ಸಕ್ರಿಯವಾಗಿಸುತ್ತದೆ. ಮತ್ತು ನೀವು ಹೆಚ್ಚು ಹಸಿವು ಅನುಭವಿಸಲು ಇದು ಕಾರಣವಾಗುತ್ತದೆ.
ತೂಕ ಇಳಿಕೆಗಾಗಿ ಉಪವಾಸದ ಸಮಯದಲ್ಲಿ ಐದು ಸಲಹೆಗಳು
ಆಹಾರ ತಜ್ಞರ ಪ್ರಕಾರ ಉಪವಾಸದ ವೇಳೆ ನಿಮ್ಮ ಇಡೀ ದಿನದ ಆಹಾರ ದಿನಚರಿ ಗಮನದಲ್ಲಿ ಇಟ್ಟುಕೊಂಡು ಊಟ ಮಾಡಬೇಕು. ಉಪವಾಸದ ವೇಳೆ ಒಂದೇ ಹೊತ್ತಿಗೆ ಅತಿಯಾಗಿ ಆಹಾರ ಸೇವನೆ ತಪ್ಪಿಸುವುದು ಮುಖ್ಯ. ಇನ್ನು ನಿಮ್ಮ ದಿನದ ಆಹಾರವು ಕಡಿಮೆ ಕ್ಯಾಲೋರಿಯಿಂದ ಕೂಡಿರಬೇಕು. ನಿಮ್ಮ ಊಟವನ್ನು ಮೊದಲೇ ಯೋಜಿಸಿದರೆ ಅತಿಯಾಗಿ ತಿನ್ನುವುದನ್ನು ತಪ್ಪಿಸಲು ಸಾಧ್ಯವಾಗುತ್ತದೆ.
ಕಡಿಮೆ ಕ್ಯಾಲೋರಿ ಆಹಾರ ಆಯ್ಕೆಗಳನ್ನು ಮೊದಲೇ ಮಾಡಿ ಇಟ್ಟುಕೊಳ್ಳಬೇಕು. ಇದು ನಿಮ್ಮ ತೂಕ ಇಳಿಕೆಗೆ ಮತ್ತು ಆರೋಗ್ಯಕರ ಆಹಾರಕ್ರಮಕ್ಕೆ ಸಹಾಯ ಮಾಡುತ್ತದೆ.
ಸಕ್ಕರೆ ಪದಾರ್ಥ ಸೇವನೆ ತಪ್ಪಿಸಿ ಮತ್ತು ಕಬ್ಬಿಣಾಂಶ ಪದಾರ್ಥ ಸೇವಿಸಿ
ಹೆಚ್ಚಿನ ಜನರು ಉಪವಾಸದ ವೇಳೆ ಸಕ್ಕರೆಯಿಂದ ಮಾಡಿದ ಸಿಹಿ ತಿಂಡಿ ಮಾತ್ರ ಸೇವಿಸಲು ಬಯಸುತ್ತಾರೆ. ಆದರೆ ಸಕ್ಕರೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಅದರಲ್ಲೂ ಉಪವಾಸದ ಸಮಯದಲ್ಲಿ ಸಕ್ಕರೆ ಸೇವನೆ ತಪ್ಪಿಸಿ. ಹೆಚ್ಚು ಸಕ್ಕರೆ ಸೇವನೆ ನಿಮ್ಮ ಅನಾರೋಗ್ಯಕರ ತೂಕ ಹೆಚ್ಚಿಸುತ್ತದೆ.
ಸಕ್ಕರೆ ಪದಾರ್ಥಗಳ ಬದಲು ನಿಮ್ಮ ಆಹಾರದಲ್ಲಿ ಹೆಚ್ಚು ಕಬ್ಬಿಣ ಅಂಶವಿರುವ ಪದಾರ್ಥಗಳನ್ನು ಇರಿಸಿ. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಪ್ರಕಾರ, ಉಪವಾಸದಲ್ಲಿ ಕಬ್ಬಿಣದಂಶ ಹೆಚ್ಚು ಚೈತನ್ಯದಿಂದ ಇರಿಸಲು ಸಹಕಾರಿ.
ಸದಾ ಚಟುವಟಿಕೆಯಿಂದ ಇರಿ
ನಿಮ್ಮನ್ನು ಸದಾ ಸಕ್ರಿಯವಾಗಿರಿಸಿ. ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಯಾವುದಾದರೂ ಕೆಲಸದಲ್ಲಿ ಮಗ್ನರಾಗಿ ಅನುಪಯುಕ್ತ ಆಲೋಚನೆಗಳಲ್ಲಿ ದಿನ ಕಳೆಯಬೇಡಿ. ಇದು ಆಹಾರ ಅಥವಾ ತೂಕಕ್ಕೆ ಸಂಬಂಧಿಸಿದ ವಿಷಯಗಳ ಮೇಲೆ ಹೋಗುವುದಿಲ್ಲ.
ಹೆಚ್ಚು ನೀರು ಕುಡಿಯಿರಿ
ಜನರು ಸಾಮಾನ್ಯವಾಗಿ ಉಪವಾಸದ ಸಮಯದಲ್ಲಿ ನೀರಿನ ಸೇವನೆ ಹೆಚ್ಚು ಮಾಡಬೇಕು. ದೇಹದಲ್ಲಿ ನಿರ್ಜಲೀಕರಣ ಸಮಸ್ಯೆ ಮತ್ತು ಹೆಚ್ಚು ದೌರ್ಬಲ್ಯ ತೊಡೆದು ಹಾಕಲು ಇದು ಸಹಕಾರಿ. ಆಹಾರದಲ್ಲಿ ನೀವು ದ್ರವ ಪದಾರ್ಥ ಸೇರಿಸಬಹುದು.
ಆಹಾರವನ್ನು ಅನುಸರಿಸುವುದರ ಜೊತೆಗೆ ನಿಮ್ಮ ಉಪವಾಸದಲ್ಲಿ ನೀರಿನ ಸೇವನೆಯೂ ಇರಲಿ. ಆಯುರ್ವೇದದ ಪ್ರಕಾರ ಉಪವಾಸದ ಸಮಯದಲ್ಲಿ ನೀವು ಬಿಸಿನೀರನ್ನು ಸೇವಿಸಿದರೆ ದೇಹಕ್ಕೆ ಪ್ರಯೋಜನವಾಗುತ್ತದೆ.