ಬೆಂಗಳೂರು: ಇಂದು ಬಂಗಾರ ಆಚಾರ ಹಾಗೂ ಆಡಂಭರವಾಗಿ ಮಾನ್ಯತೆ ಪಡೆದುಕೊಂಡಿದೆ. ಅಲ್ಪ ಸ್ವಲ್ಪ ಹಣ ಸಿಕ್ಕಿದರೂ ಇದನ್ನು ಬಂಗಾರ ಮಾಡಿಸುವ ಎಂದು ಯೋಚಿಸುವ ಮಧ್ಯಮ ವರ್ಗದವರೇ ಹೆಚ್ಚಿರುವ ಭಾರತದಂತಹ ದೇಶದಲ್ಲಿ ಬಂಗಾರದ ಬೆಲೆ ಏರಿಕೆ ನುಂಗಲಾರದ ಬಿಸಿ ತುಪ್ಪವಾಗಿದೆ. ಒಮ್ಮೆ ಏರಿಕೆ ಒಮ್ಮೆ ಇಳಿಕೆ ಹೀಗೆ ಬೆಳ್ಳಿ ಬಂಗಾರ ಹಾವು ಏಣಿ ಆಟವಾಡುತ್ತಿದೆ.
Friday Remedy: ಶುಕ್ರವಾರ ಅಪ್ಪಿತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ.! ಬಡತನ ಕಾಡುತ್ತೆ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲ 22 ಕ್ಯಾರಟ್ 1 ಗ್ರಾಂ ಚಿನ್ನದ ದರ 55 ರೂ. ಮತ್ತು 24 ಕ್ಯಾರಟ್ 1 ಗ್ರಾಂ ಚಿನ್ನದ ದರ 60 ರೂ. ಕಡಿಮೆಯಾಗಿದೆ. ಈ ಮೂಲಕ 22 ಕ್ಯಾರಟ್ 1 ಗ್ರಾಂ ಚಿನ್ನದ ದರ 7,230 ರೂ. ಮತ್ತು 24 ಕ್ಯಾರಟ್ 1 ಗ್ರಾಂ ಚಿನ್ನದ ದರ 7,887 ರೂ.ಗೆ ತಲುಪಿದೆ.
22 ಕ್ಯಾರಟ್ ಚಿನ್ನದ ದರಗಳ ವಿವರ
22 ಕ್ಯಾರಟ್ನ 8 ಗ್ರಾಂ ಚಿನ್ನ 57,840 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 72,300 ರೂ. ಮತ್ತು 100 ಗ್ರಾಂಗೆ 7,23,000 ರೂ. ಪಾವತಿಸಬೇಕಾಗುತ್ತದೆ.
24 ಕ್ಯಾರಟ್ ಚಿನ್ನದ ದರಗಳ ವಿವರ
24 ಕ್ಯಾರಟ್ನ 8 ಗ್ರಾಂ ಚಿನ್ನ 63,096 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 78,870 ರೂ. ಮತ್ತು 100 ಗ್ರಾಂಗೆ 7,88,700 ರೂ. ಪಾವತಿಸಬೇಕಾಗುತ್ತದೆ.
ಬೆಳ್ಳಿ ಬೆಲೆ
ಇತ್ತ ಬೆಳ್ಳಿ ಬೆಲೆಯಲ್ಲಿಯೂ ಇಳಿಕೆಯಾಗಿದೆ. ಬೆಳ್ಳಿ 1 ಗ್ರಾಂನ ಬೆಲೆ 93.50 ರೂ., 8 ಗ್ರಾಂಗೆ 748 ರೂ., 10 ಗ್ರಾಂಗೆ 935 ರೂ. ಮತ್ತು 1 ಕೆಜಿಗೆ 93,500 ರೂ. ಪಾವತಿಸಬೇಕಾಗುತ್ತದೆ.
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಬೆಂಗಳೂರು: 72,850 ರೂ
- ಚೆನ್ನೈ: 72,850 ರೂ
- ಮುಂಬೈ: 72,850 ರೂ
- ದೆಹಲಿ: 73,000 ರೂ
- ಕೋಲ್ಕತಾ: 72,850 ರೂ
- ಕೇರಳ: 72,850 ರೂ
- ಅಹ್ಮದಾಬಾದ್: 72,900 ರೂ
- ಜೈಪುರ್: 73,000 ರೂ
- ಲಕ್ನೋ: 73,000 ರೂ
- ಭುವನೇಶ್ವರ್: 72,850 ರೂ
ಈ ವರ್ಷಾಂತ್ಯದೊಳಗೆ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎಂದು ತಜ್ಞರು ಅಂದಾಜು ಮಾಡಿದ್ದರು. ಆದರೆ, ವರ್ಷಾರ್ಧದಲ್ಲೇ ಬೆಲೆ ಆ ಗಡಿ ದಾಟಿ ಹೋಗಿದೆ.