ಬೆಂಗಳೂರು: ಕಚ್ಚಾ ತೈಲಗಳಾದ ಪೆಟ್ರೋಲ್ ಡೀಸೆಲ್ ಕೂಡ ಬೆಲೆಗಳಲ್ಲಿ ಏರಿಳಿತಕ್ಕೊಳಗಾಗುತ್ತಿದ್ದು, ದಿನಂಪ್ರತಿ ಬಳಕೆಯಾಗುವ ಈ ಇಂಧನಗಳು ಒಮ್ಮೊಮ್ಮೆ ಬೆಲೆ ಏರಿಸಿಕೊಂಡಿರುವುದು ವಾಹನ ಚಾಲಕರಿಗೆ ತಲೆನೋವಿನ ಸಮಸ್ಯೆಯಾಗಿದೆ. ನವೀಕರಿಸಲಾಗದೇ ಇರುವ ಇಂಧನಗಳಾಗಿ ಗುರುತಿಸಿಕೊಂಡಿರುವ ಪೆಟ್ರೋಲ್, ಡೀಸೆಲ್ ಅನ್ನು ಹಲವಾರು ಪ್ರಕ್ರಿಯೆಗಳ ಮೂಲಕ ಶುದ್ಧೀಕರಿಸಿ ಬಳಕೆಗೆ ಲಭ್ಯವಾಗಿಸಲಾಗುತ್ತದೆ.
ಅಸ್ಸಾಂನಲ್ಲಿ ಪೆಟ್ರೋಲ್ ಲೀಟರ್ಗೆ 9 ಪೈಸೆ ಇಳಿಕೆಯಾಗಿ 98.89 ರೂ.ಗೆ ಮತ್ತು ಡೀಸೆಲ್ ಲೀಟರ್ಗೆ 9 ಪೈಸೆ ಇಳಿಕೆಯಾಗಿ 90.09 ರೂ.ಗೆ ತಲುಪಿದೆ. ಗೋವಾದಲ್ಲಿ, ಪೆಟ್ರೋಲ್ ಲೀಟರ್ಗೆ 15 ಪೈಸೆ ಕಡಿಮೆಯಾಗಿ 96.56 ರೂಪಾಯಿಗಳಿಗೆ ಮತ್ತು ಡೀಸೆಲ್ ಲೀಟರ್ಗೆ 14 ಪೈಸೆ ಕಡಿಮೆಯಾಗಿ 88.33 ರೂಪಾಯಿಗಳಿಗೆ ಲಭ್ಯವಿದೆ. ಮಧ್ಯಪ್ರದೇಶದಲ್ಲಿ ಪೆಟ್ರೋಲ್ 21 ಪೈಸೆ ಇಳಿಕೆಯ ನಂತರ ಲೀಟರ್ಗೆ 107.49 ರೂ.ಗೆ ಮತ್ತು ಡೀಸೆಲ್ 18 ಪೈಸೆ ಇಳಿಕೆಯ ನಂತರ ಲೀಟರ್ಗೆ 92.80 ರೂ.ಗೆ ಲಭ್ಯವಿದೆ.
Friday Remedy: ಶುಕ್ರವಾರ ಅಪ್ಪಿತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ.! ಬಡತನ ಕಾಡುತ್ತೆ
ಮಹಾರಾಷ್ಟ್ರದಲ್ಲಿ ಪೆಟ್ರೋಲ್ ದರ ಲೀಟರ್ಗೆ 2 ಪೈಸೆ ಇಳಿಕೆಯಾಗಿ 104.60 ರೂ.ಗೆ ಮತ್ತು ಡೀಸೆಲ್ ಪ್ರತಿ ಲೀಟರ್ಗೆ 2 ಪೈಸೆ ಇಳಿಕೆಯಾಗಿ 91.12 ರೂ.ಗೆ ತಲುಪಿದೆ. ಯುಪಿಯಲ್ಲಿ, ಪೆಟ್ರೋಲ್ 24 ಪೈಸೆ ಇಳಿಕೆಯ ನಂತರ ಲೀಟರ್ಗೆ 94.37 ರೂ.ಗೆ ಮತ್ತು ಡೀಸೆಲ್ 29 ಪೈಸೆ ಇಳಿಕೆಯ ನಂತರ ಲೀಟರ್ಗೆ 87.41 ರೂ.ಗೆ ಲಭ್ಯವಿದೆ.
ಇಂದು ಛತ್ತೀಸ್ಗಢ, ಹಿಮಾಚಲ ಪ್ರದೇಶ, ಜಾರ್ಖಂಡ್, ಕೇರಳ, ಮಿಜೋರಾಂ, ಒಡಿಶಾ ಮತ್ತು ಪಂಜಾಬ್ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿದೆ.
ದೆಹಲಿಯಲ್ಲಿ ಪೆಟ್ರೋಲ್ ಬೆಲೆ 94.77 ರೂ. ಮತ್ತು ಡೀಸೆಲ್ ಬೆಲೆ ಲೀಟರ್ಗೆ 87.67 ರೂ. ಮುಂಬೈನಲ್ಲಿ ಪೆಟ್ರೋಲ್ ಬೆಲೆ 103.50 ರೂ ಮತ್ತು ಡೀಸೆಲ್ ಬೆಲೆ ಲೀಟರ್ಗೆ 90.03 ರೂ., ಬೆಂಗಳೂರು ಪೆಟ್ರೋಲ್ 102.86 ರೂ., ಡೀಸೆಲ್ 88.94 ರೂ. ಇದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ 105.01 ರೂ ಮತ್ತು ಡೀಸೆಲ್ ಬೆಲೆ ಲೀಟರ್ಗೆ 91.82 ರೂ. ಚೆನ್ನೈನಲ್ಲಿ ಪೆಟ್ರೋಲ್ ಬೆಲೆ 100.80 ರೂ ಮತ್ತು ಡೀಸೆಲ್ ಬೆಲೆ ಲೀಟರ್ಗೆ 92.39 ರೂ. ಇದೆ.
ಇಂದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ 73 ಡಾಲರ್ ದಾಟಿದೆ. ಬ್ರೆಂಟ್ ಕಚ್ಚಾ ತೈಲವು ಇಂದು ಪ್ರತಿ ಬ್ಯಾರೆಲ್ಗೆ 73.52 ಡಾಲರ್ನಲ್ಲಿ ವಹಿವಾಟು ನಡೆಸುತ್ತಿದೆ, ಆದರೆ ಡಬ್ಲ್ಯೂಟಿಐಕಚ್ಚಾ ಪ್ರತಿ ಬ್ಯಾರೆಲ್ಗೆ 70.41 ಡಾಲರ್ನಲ್ಲಿ ವಹಿವಾಟು ನಡೆಸುತ್ತಿದೆ.