ಬೆಳಗಾವಿ: ಸದನದಲ್ಲಿ ಪಂಚಮಸಾಲಿ ಹೋರಾಟದ ಮೇಲಿನ ಲಾಠಿ ಚಾರ್ಜ್ ಪ್ರಸ್ತಾಪ ಮಾಡಿದ ವಿರೋಧ ಪಕ್ಷದ ನಾಯಕ ಆರ್ ಅಶೋಕ್, ಸರಕಾರದ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಂತಾಪ ಸೂಚನೆ ನಿರ್ಣಯದ ಬೆನ್ನಲ್ಲೇ ಬಿಜೆಪಿ ಸದಸ್ಯರು ಈ ಕುರಿತಾಗಿ ಗದ್ದಲ ಉಂಟು ಮಾಡಿದರು.
ಪ್ರಶ್ನೋತ್ತರದ ಬಳಿಕ ಅವಕಾಶ ಕೊಡುತ್ತೇನೆ ಎಂದು ಸ್ಪೀಕರ್ ಖಾದರ್ ಹೇಳಿದರು. ಆದರೆ ಇದಕ್ಕೆ ಒಪ್ಪದ ಬಿಜೆಪಿ ಸದಸ್ಯರು ಸದನ ನಡೆದರು. ಇದರ ಕುರಿತು ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವರು ಹೇಳಿಕೆ ಕೊಡಲಿ ಎಂದು ಸುನೀಲ್ ಕುಮಾರ್ ಆಗ್ರಹಿಸಿದರು.
ದಿನಾ ಒಂದು ಗ್ಲಾಸ್ ಈ ನೀರನ್ನು ಕುಡಿಯಿರಿ ಸಾಕು: ಬಲೂನ್ ತರ ಇರೋ ಹೊಟ್ಟೆ ಬೇಗ ಕರಗುತ್ತೆ!
ಏತನ್ಮಧ್ಯೆ, ಪಂಚಮಸಾಲಿ 2ಎ ಮೀಸಲಾತಿಗೆ ಆಗ್ರಹಿಸಿ ಹೋರಾಟ ನಡೆಸುತ್ತಿರುವವರ ಮೇಲೆ ಲಾಠಿಚಾರ್ಜ್ ನಡೆಸಿದ ಪ್ರಕರಣವೂ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಒಂದೆಡೆ, ಬಸವ ಜಯಮೃತ್ಯುಂಜಯ ಶ್ರೀ ಕರೆಯಂತೆ ಲಿಂಗಾಯತರು ರಾಜ್ಯದಾದ್ಯಂತ ತಸ್ತೆ ತಡೆ ಹಾಗೂ ಪ್ರತಿಭಟನೆ ನಡೆಸುತ್ತಿದ್ದಾರೆ. ಮತ್ತೊಂದೆಡೆ, ಕಲಾಪದಲ್ಲಿಯೂ ಈ ವಿಚಾರ ಪ್ರತಿಧ್ವನಿಸುತ್ತಿದೆ.