ತುಮಕೂರು: ಬೆಳ್ಳಾವಿ ಕ್ಷೇತ್ರದ ಮಾಜಿ ಶಾಸಕ ಆರ್.ನಾರಾಯಣ ಅವರು, ವಿಧಿವಶರಾಗಿದ್ದಾರೆ. 81 ವರ್ಷದ ಆರ್.ನಾರಾಯಣ ವಯೋಸಹಜ ಕಾಯಿಲೆಯಿಂದ ಸಿದ್ಧಗಂಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದರು. ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
Chanakya Niti: ಅಪ್ಪಿ ತಪ್ಪಿಯೂ ಯಾರ ಮುಂದೆ ಹೇಳಬಾರದ ವಿಷಯಗಳು ಯಾವುವು ಗೊತ್ತಾ..?
ಬೆಳ್ಳಾವಿ ಕ್ಷೇತ್ರದಿಂದ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಒಟ್ಟು ಮೂರು ಬಾರಿ ಶಾಸಕರಾಗಿದ್ದರು. ದಿ. ಎಸ್.ಎಮ್ ಕೃಷ್ಣ ಅವರು ಸಿಎಂ ಆಗಿದ್ದಾಗ ಹೌಸಿಂಗ್ ಬೋರ್ಡ್ ಚೇರ್ಮನ್ ಆಗಿ ಹಲವು ಗಮನಾರ್ಹ ಕೆಲಸ ಮಾಡಿದ್ದರು. ಇಂದು (ಡಿ.12) ಮಧ್ಯಾಹ್ನ 12 ಗಂಟೆಯಿಂದ ಅವರ ಗಾಂಧಿನಗರದ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ.