ಹುಬ್ಬಳ್ಳಿ: 2ಎ ಮೀಸಲಾತಿಗಾಗಿ ಪಂಚಮಸಾಲಿ ಲಿಂಗಾಯತ ಸಮುದಾಯ ಸಂದಿಂದ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಹೋರಾಟ ಮಾಡುತ್ತಿದ್ದರು, ಈ ವೇಳೆ ಪೊಲೀಸರು ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಮಾಡಿದ್ದನ್ನು ಖಂಡಿಸಿ ಇಂದು ಹುಬ್ಬಳ್ಳಿಯ ವಿವಿಧ ಭಾಗಗಳಲ್ಲಿ ರಸ್ತೆ ತಡೆದು ಲಿಂಗಾಯತ ಸಮುದಾಯದವರು ಪ್ರತಿಭಟನೆ ಮಾಡಿದರು.
Chanakya Niti: ಅಪ್ಪಿ ತಪ್ಪಿಯೂ ಯಾರ ಮುಂದೆ ಹೇಳಬಾರದ ವಿಷಯಗಳು ಯಾವುವು ಗೊತ್ತಾ..?
ಹುಬ್ಬಳ್ಳಿ ಗೋಕುಲ ಗ್ರಾಮದ ಗುರು ಹಿರಿಯರ ನೇತೃತ್ವದಲ್ಲಿ ಇಂದು ರಸ್ತೆಗಿಳಿದ ಲಿಂಗಾಯತ ಸಮುದಾಯ ಗೋಕುಲ ರಸ್ತೆ ತಡೆದು ಸರ್ಕಾರದ ವಿರುದ್ಧ ಧಿಕ್ಕಾರ ಘೋಷಣೆ ಕೂಗುತ್ತ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರ ಪಂಚಮಸಾಲಿ ಲಿಂಗಾಯತರ ಮೇಲೆ ದೌರ್ಜನ್ಯ ಮಾಡ್ತಿದೆ. ಮೀಸಲಾತಿ ಕೇಳಿದ್ರೆ ಲಾಠಿ ಚಾರ್ಜ್ ಮಾಡಿಸುತ್ತಾರೆ. ಇದು ಖಂಡಿನಿಯ ಎಂದು ಪ್ರತಿಭಟನಕಾರರು ಕಿಡಿ ಕಾರಿದರು.