ಬೆಂಗಳೂರು: ಕಚ್ಚಾ ತೈಲಗಳಾದ ಪೆಟ್ರೋಲ್ ಡೀಸೆಲ್ ಕೂಡ ಬೆಲೆಗಳಲ್ಲಿ ಏರಿಳಿತಕ್ಕೊಳಗಾಗುತ್ತಿದ್ದು, ದಿನಂಪ್ರತಿ ಬಳಕೆಯಾಗುವ ಈ ಇಂಧನಗಳು ಒಮ್ಮೊಮ್ಮೆ ಬೆಲೆ ಏರಿಸಿಕೊಂಡಿರುವುದು ವಾಹನ ಚಾಲಕರಿಗೆ ತಲೆನೋವಿನ ಸಮಸ್ಯೆಯಾಗಿದೆ. ನವೀಕರಿಸಲಾಗದೇ ಇರುವ ಇಂಧನಗಳಾಗಿ ಗುರುತಿಸಿಕೊಂಡಿರುವ ಪೆಟ್ರೋಲ್, ಡೀಸೆಲ್ ಅನ್ನು ಹಲವಾರು ಪ್ರಕ್ರಿಯೆಗಳ ಮೂಲಕ ಶುದ್ಧೀಕರಿಸಿ ಬಳಕೆಗೆ ಲಭ್ಯವಾಗಿಸಲಾಗುತ್ತದೆ.
ಇಂದು ನವದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 94.72 ರೂ ಮತ್ತು ಡೀಸೆಲ್ ಬೆಲೆ ಲೀಟರ್ಗೆ 87.62 ರೂ ಆಗಿದೆ. ಮುಂಬೈನಲ್ಲಿ ಪೆಟ್ರೋಲ್ ಬೆಲೆ 104.21 ರೂ ಮತ್ತು ಡೀಸೆಲ್ ಬೆಲೆ 92.15 ರೂ. ಇದಲ್ಲದೇ ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 103.94 ರೂ. ಮತ್ತು ಡೀಸೆಲ್ ಬೆಲೆ ಲೀಟರ್ಗೆ 90.76 ರೂ. ಇದಲ್ಲದೇ, ಚೆನ್ನೈನಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 100.75 ರೂ ಮತ್ತು ಡೀಸೆಲ್ ಬೆಲೆ ಲೀಟರ್ಗೆ 92.34 ರೂ. ಇದೆ.
Chanakya Niti: ಅಪ್ಪಿ ತಪ್ಪಿಯೂ ಯಾರ ಮುಂದೆ ಹೇಳಬಾರದ ವಿಷಯಗಳು ಯಾವುವು ಗೊತ್ತಾ..?
ನೋಯ್ಡಾದಲ್ಲಿ ಪೆಟ್ರೋಲ್ 94.66 ರೂ., ಡೀಸೆಲ್ 87.76 ರೂ., ಲಕ್ನೋ ಪೆಟ್ರೋಲ್ 94.65 ರೂ., ಡೀಸೆಲ್ 87.76 ರೂ., ಬೆಂಗಳೂರು ಪೆಟ್ರೋಲ್ 102.86 ರೂ., ಡೀಸೆಲ್ 88.94 ರೂ., ಹೈದರಾಬಾದ್ ಪೆಟ್ರೋಲ್ 107.41 ರೂ., ಡೀಸೆಲ್ 95.65 ರೂ., ಜೈಪುರ ಪೆಟ್ರೋಲ್ 104.88 ರೂ., ಡೀಸೆಲ್ 90.36 ರೂ.,
ತಿರುವನಂತಪುರಂ ಪೆಟ್ರೋಲ್ 107.62 ರೂ., ಡೀಸೆಲ್ 96.43 ರೂ., ಭುವನೇಶ್ವರ ಪೆಟ್ರೋಲ್ 101.06 ರೂ., ಡೀಸೆಲ್ 92.91 ರೂ. ಇತ್ತು. ಪೆಟ್ರೋಲ್ ಮತ್ತು ಡೀಸೆಲ್ ಉತ್ಪಾದನೆಗೆ ಪ್ರಮುಖ ಕಚ್ಚಾ ವಸ್ತುವಾಗಿ, ಜಾಗತಿಕ ಕಚ್ಚಾ ತೈಲ ಬೆಲೆಗಳಲ್ಲಿನ ಏರಿಳಿತಗಳು ಭಾರತದಲ್ಲಿ ಇಂಧನ ವೆಚ್ಚಗಳ ಮೇಲೆ ನೇರ ಪರಿಣಾಮ ಬೀರುತ್ತವೆ.