ರಕ್ಷಿತ್ ಶೆಟ್ಟಿ ನಟನೆಯ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದಲ್ಲಿ ಮೋಡಿ ಮಾಡಿದ್ದ ನಟಿ ರುಕ್ಮಿಣಿ ವಸಂತ್ ಇದೀಗ ಕಾಲಿವುಡ್ ನಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಕೆಲ ತಿಂಗಳುಗಳ ಹಿಂದೆಯೇ ವಿಜಯ್ ಸೇತುಪತಿಗೆ ರುಕ್ಮಿಣಿ ನಾಯಕಿಯಾಗಿರುವ ವಿಚಾರ ಸದ್ದು ಮಾಡಿತ್ತು. ಇದೀಗ ರುಕ್ಮಿಣಿ ಹುಟ್ಟುಹಬ್ಬದ ಹಿನ್ನೆಲೆ ಅವರ ಪಾತ್ರದ ಗ್ಲಿಂಪ್ಸ್ ಅನ್ನು ಚಿತ್ರತಂಡ ರಿವೀಲ್ ಮಾಡಿದೆ.
ತಮಿಳಿನ ಖ್ಯಾತ ನಟ ವಿಜಯ್ ಸೇತುಪತಿಗೆ ಜೋಡಿಯಾಗಿ ACE ಸಿನಿಮಾದಲ್ಲಿ ರುಕ್ಕು ಎಂಬ ಪಾತ್ರದಲ್ಲಿ ರುಕ್ಮಿಣಿ ವಂಸತ್ ನಟಿಸುತ್ತಿದ್ದಾರೆ. ಚಿತ್ರದ ಗ್ಲಿಂಪ್ಸ್ ನಲ್ಲಿ ನಟಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ವಿಜಯ್ ಸೇತುಪತಿಗೆ ನಾಯಕಿಯಾಗುವ ಮೂಲಕ ರುಕ್ಮಿಣಿ ತಮಿಳು ಚಿತ್ರರಂಗದಲ್ಲೂ ತಮ್ಮ ಖಾತೆ ತೆರೆದಿದ್ದಾರೆ.
ಆರುಮುಖ ಕುಮಾರ್ ನಿರ್ದೇಶನದ ʼಏಸ್ʼ ಚಿತ್ರದ ಟೀಸರ್ ಇದೀಗ ಗಮನ ಸೆಳಯುತ್ತಿದೆ. ಕ್ರೈಂ, ಲವ್ ಮತ್ತು ಕಾಮಿಡಿಯನ್ನು ಬೆರೆಸಿ ಈ ಚಿತ್ರವನ್ನು ಕಟ್ಟಿ ಕೊಡಲಾಗಿದೆ. ಇದರಲ್ಲಿ ರುಕ್ಮಿಣಿ ಮಲೇಷ್ಯಾದಲ್ಲಿ ಜನಿಸಿದ ತಮಿಳು ಯುವತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ರುಕ್ಮಿಣಿ ಪಾತ್ರಕ್ಕೆ ಬಹಳಷ್ಟು ಪ್ರಾಮುಖ್ಯತೆ ಇದೆ ಎಂದು ಚಿತ್ರತಂಡ ಹೇಳಿದೆ.