ತುಮಕೂರು:– ಗುಬ್ಬಿ ತಾಲೂಕಿನ ಚಿಕ್ಕಚೆಂಗಾವಿ ಗ್ರಾಮದ ಬಳಿ ಜೆಜೆಎಂ ಕಾಮಗಾರಿಗೆ ತೆಗೆದಿದ್ದ ಟ್ರಂಚ್ಗೆ ಟ್ರ್ಯಾಕ್ಟರ್ ಉರುಳಿ ಬಿದ್ದು ಚಾಲಕನ ಕೈ ಮೂಳೆ ಮುರಿದಿರುವ ಘಟನೆ ಜರುಗಿದೆ.
ರಸ್ತೆ ಬದಿ ಪೈಪ್ ಹುಗಿಯಲು ತೆಗೆದಿರುವ ಟ್ರಂಚ್ ಮುಚ್ಚದೆ ಅನೇಕ ದಿನಗಳಿಂದ ಹಾಗೆಯೇ ಬಿಡಲಾಗಿದೆ. ಸಂಬಂಧಿಸಿದ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜೆಜೆಎಂ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಅಪೂರ್ಣಗೊಂಡಿದೆ. ಹಲವೆಡೆ ಪೈಪ್ಗಳನ್ನು ಸಂಪರ್ಕಿಸದೆ ಇರುವುದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ. ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸರ್ಕಾರ ಯೋಜನೆಯನ್ನು ಜಾರಿಗೊಳಿಸಿದ್ದರೂ, ಸಂಬಂಧಿಸಿದ ಅಧಿಕಾರಿಗಳು ವ್ಯವಸ್ಥಿತವಾಗಿ ಅನುಷ್ಠಾನಗೊಳಿಸದೆ ಅನುದಾನವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.