ಇನ್ಸ್ಟಾ, ಫೇಸ್ಬುಕ್, ವಾಟ್ಸಾಪ್ ಬಳಕೆದಾರರಿಗೆ ರಾತ್ರೋ ರಾತ್ರಿ ಬಿಗ್ ಶಾಕ್ ಎದುರಾಗಿದೆ. ರಾತ್ರಿ ಸುಮಾರು 11 ಗಂಟೆಯಿಂದ ಮೆಟಾ ಸರ್ವರ್ ಡೌನ್ ಆದ ಹಿನ್ನೆಲೆಯಲ್ಲಿ ಈ ಎಲ್ಲಾ ಅಪ್ಲಿಕೇಷನ್ಗಳು ಕೆಲಸ ಸ್ಥಗಿತಗೊಳಿಸಿದ್ದವು. ಇದರಿಂದ ಬಳಕೆದಾರರು ಕರೆ, ಸಂದೇಶಗಳನ್ನು ಕಳುಹಿಸಲು ಹಾಗೂ ಸ್ವೀಕರಿಸಲಾಗದೇ ತೊಂದರೆ ಅನಭವಿಸಿದರು.
ಕೇವಲ ಕರ್ನಾಟಕ, ಭಾರತದಲ್ಲಿ ಮಾತ್ರ ಈ ಸಮಸ್ಯೆ ಆಗಲಿಲ್ಲ. ಪ್ರಪಂಚದಾದ್ಯಂತ ಬಳಕೆದಾರರು ಆಘಾತಕ್ಕೆ ಒಳಗಾಗಿದ್ದರು. ಕೋಟ್ಯಾಂತರ ಜನರು ಯಾವುದೇ ಸಂದೇಶಗಳನ್ನು ಕಳುಹಿಸಲಾಗದೇ ಪೇಚಿಗೆ ಸಿಲುಕಿದ್ದರು. WhatsApp ಇನ್ನೂ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಜನ ದೂರುತ್ತಿದ್ದಾರೆ.
ರಾತ್ರಿ 11 ಗಂಟೆಗೆ 20 ಸಾವಿರಕ್ಕೂ ಹೆಚ್ಚು ದೂರುಗಳು ಬಂದಿವೆ. ಇನ್ಸ್ಟಾಗ್ರಾಮ್ ವಿರುದ್ಧ ಸುಮಾರು 15 ಸಾವಿರ, ಹಾಗೂ ಫೇಸ್ಬುಕ್ ಬಗ್ಗೆ 2.5 ಸಾವಿರ ದೂರುಗಳು ದಾಖಲಾಗಿವೆ ಎಂದು ತಿಳಿಸಿದೆ.