ಒಡಿಶಾ:- ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಪ್ರಕರಣ ಸಂಬಂಧ ಜೈಲಿಗೆ ಸೇರಿ ಬಳಿಕ ರಿಲೀಸ್ ಆಗುತ್ತಿದ್ದಂತೆ ಕೊಂದಿರುವ ಘಟನೆ ಜರುಗಿದೆ.
ಒಡಿಶಾದ ಸುಂದರ್ಗಢ್ ಜಿಲ್ಲೆಯಲ್ಲಿ ಘಟನೆ ನಡೆದಿದೆ. ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿ ಕುನು ಕಿಸಾನ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ.ಶಿಕ್ಷೆ ತಪ್ಪಿಸಲು ಆಕೆಯನ್ನು ಕೊಲ್ಲಲು ಸಂಚು ರೂಪಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಬಾಲಕಿಯನ್ನು ಜಾರ್ಸುಗುಡಾದಿಂದ ಅಪಹರಿಸಿ ರೂರ್ಕೆಲಾದಲ್ಲಿ ಕೊಲೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಕೆ ಕಾಣೆಯಾಗಿರುವ ಕುರಿತು ಪ್ರಕರಣ ದಾಖಲಿಸಲಾಗಿತ್ತು, ಮೊದಲು ಆರೋಪಿಯ ಮೇಲೆ ಅನುಮಾನ ಬಂದಿತ್ತು, ಆಗ ಎಲ್ಲೆಲ್ಲಿ ಸಿಸಿಟಿವಿ ಇದೆಯೋ ಅಲ್ಲೆಲ್ಲಾ ಪರಿಶೀಲಿಸಿದಾಗ ಆರೋಪಿ ಹಾಗೂ ಬಾಲಕಿ ಒಟ್ಟಿಗೆ ಇರುವುದು ಕಂಡುಬಂದಿತ್ತು.
ಕಿಸಾನ್ ನಂತರ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದ. ಆರಂಭದಲ್ಲಿ ದೇಹವನ್ನು ಬ್ರಹ್ಮಿಣಿ ನದಿಗೆ ಎಸೆದಿರುವುದಾಗಿ ಹೇಳಿಕೊಂಡಿದ್ದ. ನಂತರ ಹನುಮಾನ್ ಬಾಟಿಕಾ-ತಾರಕೇರಾ ಅಣೆಕಟ್ಟಿನ ಬಳಿ ಕೆಸರು ತುಂಬಿದ ಪ್ರದೇಶದ ಕೆಲವು ಭಾಗಗಳಲ್ಲಿ ಇಟ್ಟಿರುವುದಾಗಿ ಒಪ್ಪಿಕೊಂಡಿದ್ದ ಎನ್ನಲಾಗಿದೆ.