ಬೆಂಗಳೂರು:- ಮಹಿಳಾ ಪ್ರಯಾಣಿಕರಿಗೆ ಬಿಎಂಟಿಸಿ ಸಂಸ್ಥೆಯು ಗುಡ್ ನ್ಯೂಸ್ ಕೊಟ್ಟಿದೆ.
ಇನ್ಮೇಲೇನಿದ್ರೂ ಶಾಂತಿ ಬಿಟ್ಟು ಕ್ರಾಂತಿ ಹೋರಾಟ ಅಷ್ಟೇ: ಜಯಮೃತ್ಯುಂಜಯ ಶ್ರೀ!
ಎಸ್, ರಾಜ್ಯ ಸರ್ಕಾರದ ಶಕ್ತಿ ಯೋಜನೆಯಡಿ ಬಿಎಂಟಿಸಿ ಬಸ್ನಲ್ಲಿ ಮಹಿಳೆಯರು ಉಚಿತವಾಗಿ ಸಂಚಾರ ಮಾಡಬಹುದು. ಆಧಾರ್ ಕಾರ್ಡ್ ಕನ್ನಡದಲ್ಲಿ ವಿಳಾಸ ಇಲ್ಲಾಂದರೂ ಪರವಾಗಿಲ್ಲ, ಕರ್ನಾಟಕದ ವಿಳಾಸವಿದ್ದರೆ ಸಾಕು ಎಂದು ಬಿಎಂಟಿಸಿ ಆದೇಶ ಹೊರಡಿಸಿದೆ.
ಈ ಹಿಂದೆ ಆಧಾರ್ ಕಾರ್ಡ್ನಲ್ಲಿ ಕನ್ನಡದಲ್ಲಿ ವಿಳಾಸವಿರಬೇಕೆಂದು ಬಿಎಂಟಿಸಿಯ ಕಂಡಕ್ಟರ್ಗಳು ಕಿರಿಕ್ ಮಾಡುತ್ತಿದ್ದರು. ದೇಶದ ನಾಗರೀಕರು ಆಧಾರ್ ಕಾರ್ಡನ್ನು ದೇಶದಾದ್ಯಂತ ಯಾವುದೇ ರಾಜ್ಯದಲ್ಲಿ ಪಡೆಯಲು ಅವಕಾಶವಿದ್ದು, ಯಾವ ರಾಜ್ಯದಲ್ಲಿ ಆಧಾರ್ ಕಾರ್ಡ್ ಅನ್ನು ಪಡೆಯುತ್ತಾರೋ ಆ ರಾಜ್ಯದ ಅಧಿಕೃತ ಭಾಷೆ ಮತ್ತು ಅಂಗ್ಲ ಭಾಷೆಯಲ್ಲಿ ಆಧಾರ್ ಕಾರ್ಡ್ ಮುದ್ರಣವಾಗುತ್ತದೆ. ಆದ್ದರಿಂದ ಕನ್ನಡ ಹೊರತುಪಡಿಸಿ ಅನ್ಯಭಾಷೆಯಲ್ಲಿ ಮುದ್ರಿತ ಆಧಾರ್ ಕಾರ್ಡ್ ಗಳಲ್ಲಿನ ಆಂಗ್ಲ ಭಾಷೆಯಲ್ಲಿರುವ ವಿಳಾಸವನ್ನು ಪರಿಶೀಲಿಸಿ ವಿಳಾಸವು ಕರ್ನಾಟಕ ರಾಜ್ಯದಾಗಿದ್ದಲ್ಲಿ, ಆ ಆಧಾರ್ ಕಾರ್ಡ್ ಅನ್ನು ಮಾನ್ಯ ಮಾಡಿ ಶಕ್ತಿಯೋಜನೆ ಅಡಿಯಲ್ಲಿ ಉಚಿತ ಟಿಕೆಟ್ ನೀಡಲು ಸೂಚನೆ ನೀಡಲಾಗಿದೆ.
ಒಟ್ಟಿನಲ್ಲಿ ಬಿಎಂಟಿಸಿ ಬಸ್ನಲ್ಲಿ ಉಚಿತವಾಗಿ ಟಿಕೆಟ್ ತೆಗೆದುಕೊಂಡು ಪ್ರಯಾಣ ಮಾಡಬೇಕೆಂದರೆ, ಆಧಾರ್ ಕಾರ್ಡ್ ಕನ್ನಡದಲ್ಲೇ ಇರಬೇಕೆಂದು ಕಿರಿಕ್ ಮಾಡುತ್ತಿದ್ದ ಕಂಡಕ್ಟರ್ಗಳಿಗೆ ಬಿಎಂಟಿಸಿಯ ಹೊಸ ಆದೇಶ ಬ್ರೇಕ್ ಹಾಕಿರುವುದಂತೂ ನಿಜ.