ಮಂಡ್ಯ : ಮದ್ದೂರು ತಾಲೂಕಿನ ಸೋಮನಹಳ್ಳಿಯಲ್ಲಿ ಮಾಜಿ ಸಿಎಂ ಎಸ್ಎಂ ಕೃಷ್ಣ ಅವರ ಅಂತ್ಯಕ್ರಿಯೆ ನಡೆಯಲಿದೆ. ಎಸ್ ಎಂಕೃಷ್ಣ ಅವರ ಇಷ್ಟದ ಸ್ಥಳ ಸೋಮನಹಳ್ಳಿ ಹೊರವಲಯದ ಕಾಫಿ ಡೇ ಆವರಣದಲ್ಲಿ ಸಂಜೆ 4 ಗಂಟೆಯ ನಂತರ ಅಂತ್ಯಸಂಸ್ಕಾರ ನಡೆಯಲಿದ್ದು, ಸಕಲ ಸಿದ್ಧತೆಗಳು ನಡೀತಿವೆ.
ಇಂದು ಮಾಜಿ ಸಿಎಂ ಎಸ್.ಎಂ.ಕೃಷ್ಣ ಅಂತ್ಯಕ್ರಿಯೆ; ಪೊಲೀಸ್ ಬಿಗಿ ಬಂದೋಬಸ್ತ್
ಎಸ್ಎಂ ಕೃಷ್ಣ ಅವರ ಮೂಲ ಮನೆ ಸೋಮನಹಳ್ಳಿ ಒಳಗಡೆ ಇದೆ. ಎಸ್ ಎಂ ಕೃಷ್ಣ ರಾಜ್ಯ ಸಚಿವರಾಗಿದ್ದಾಗ, ತಮ್ಮ ಪಿತ್ರಾರ್ಜಿತ ಆಸ್ತಿಯಲ್ಲಿ ಒಂದು ಗೆಸ್ಟ್ ಹೌಸ್ ನಿರ್ಮಿಸಿದ್ದರು. ಬೆಂಗಳೂರಿನಲ್ಲಿ ನೆಲೆಸಿದ್ದರಿಂದಾಗಿ ಆ ಮನೆಯನ್ನು ಹೆಚ್ಚಾಗಿ ಬಳಸುತ್ತಿರಲಿಲ್ಲ. ಆದರೆ ಆ ಮನೆಯಲ್ಲಿದ್ದ ಒಂದು ಕೋಣೆ ಮಾತ್ರ ಅವರ ಇಷ್ಟದ ಜಾಗವಾಗಿತ್ತು. ಮಂಡ್ಯ, ಮೈಸೂರಿಗೆ ಭೇಟಿ ಕೊಟ್ಟಾಗ ಆ ಕೋಣೆಯಲ್ಲಿಯೇ ಉಳಿದುಕೊಳ್ಳುತ್ತಿದ್ದರು.
ಆದರೆ ಆ ಬಳಿಕ ಅದೇ ಮನೆಯನ್ನು ತಮ್ಮ ಅಳಿಯ ಸಿದ್ದಾರ್ಥಗೆ ಕಾಫಿ ಡೇಗಾಗಿ ಬಿಟ್ಟುಕೊಟ್ಟಿದ್ದರು. ಕಾಫಿ ಡೇಗೆ ನವೀಕರಣ ಮಾಡಿದ್ದರೂ ಕೃಷ್ಣ ಅವರ ಪ್ರೀತಿಯ ಕೊಠಡಿಯನ್ನು ಅವರಿಗಾಗಿಯೇ ಬಿಡಲಾಗಿತ್ತು. ಮೈಸೂರು, ಮಂಡ್ಯ ಕಡೆಗೆ ಹೋದಾಗ ಕಾಫಿ ಡೇಯಲ್ಲಿರುವ ಆ ಒಂದು ಕೋಣೆಯಲ್ಲಿ ಕಾಲ ಕಳೆದು ಬಳಿಕ ಮನೆಗೆ ತೆರಳುತ್ತಿದ್ದರು. ಇದೀಗ ಅದೇ ಕಾಫಿ ಡೇ ಆವರಣದಲ್ಲಿ ಅಂತಿಮ ದರ್ಶನ ಹಾಗೂ ಅಂತ್ಯ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 3ರ ವರೆಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, ಜಿಲ್ಲಾಡಳಿತ ಅಂತ್ಯ ಸಂಸ್ಕಾರಕ್ಕೆ ಸಕಲ ಸಿದ್ಧತೆ ನಡೆಸಿದೆ