ಇಂದು ಲ್ಯಾಪ್ಟಾಪ್ ನಮ್ಮ ದೈನಂದಿನ ಜೀವನದ ಒಂದು ಭಾಗವಾಗಿದೆ. ಅಗತ್ಯಕ್ಕೆ ತಕ್ಕಷ್ಟು ಬಳಸಿದರೂ ಸರಿಯಾಗಿ ಬಳಸದಿದ್ದರೆ ವಾಸಿಯಾಗದ ಕಾಯಿಲೆಗಳು ಕಾಡುತ್ತವೆ ಎನ್ನುತ್ತಾರೆ ಆರೋಗ್ಯ ತಜ್ಞರು. ಆರೋಗ್ಯ ತಜ್ಞರ ಪ್ರಕಾರ ಪುರುಷರು ತಮ್ಮ ತೊಡೆಯ ಮೇಲೆ ಗಂಟೆಗಟ್ಟಲೆ ಲ್ಯಾಪ್ ಟಾಪ್ ಇಟ್ಟುಕೊಂಡು ಕೆಲಸ ಮಾಡುವುದು ಅವರ ಸಂತಾನೋತ್ಪತ್ತಿ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎನ್ನಲಾಗುತ್ತದೆ.
ಇಂದು ಮಾಜಿ ಸಿಎಂ ಎಸ್.ಎಂ.ಕೃಷ್ಣ ಅಂತ್ಯಕ್ರಿಯೆ; ಪೊಲೀಸ್ ಬಿಗಿ ಬಂದೋಬಸ್ತ್
ಪುರುಷರ ವೀರ್ಯಾಣುಗಳ ಸಂಖ್ಯೆಯೂ ಕಡಿಮೆಯಾಗುತ್ತದೆ. ವೀರ್ಯದ ಗುಣಮಟ್ಟವೂ ಬಹಳ ಮಟ್ಟಿಗೆ ಕಡಿಮೆಯಾಗುತ್ತದೆ. ಏಕೆಂದರೆ ಪುರುಷ ಸಂತಾನೋತ್ಪತ್ತಿ ವ್ಯವಸ್ಥೆಯು ಹೆಚ್ಚಿನ ತಾಪಮಾನ ತಡೆದುಕೊಳ್ಳುವುದಿಲ್ಲ. ವೀರ್ಯ ಉತ್ಪಾದನೆ ಮತ್ತು ಕಾರ್ಯನಿರ್ವಹಣೆಗೆ ತಂಪಾದ ವಾತಾವರಣ ಅತ್ಯಗತ್ಯ ಎನ್ನುತ್ತಾರೆ ತಜ್ಞರು.
ದೀರ್ಘಕಾಲದವರೆಗೆ ನಿಮ್ಮ ತೊಡೆಯ ಮೇಲೆ ಲ್ಯಾಪ್ ಟಾಪ್ ಇಟ್ಟುಕೊಂಡು ಕೆಲಸ ಮಾಡುವುದರಿಂದ ಬಂಜೆತನದ ಸಮಸ್ಯೆ ಉಲ್ಬಣಗೊಳಿಸಬಹುದು. ಹೌದು ಇದರ ಬಗ್ಗೆ ನೀವು ಎಚ್ಚರ ವಹಿಸಲೇಬೇಕು. ಇಲ್ಲಿದೆ ಆ ಕುರಿತು ಹೆಚ್ಚಿನ ಮಾಹಿತಿ. ಅವುಗಳನ್ನು ತಿಳಿದುಕೊಳ್ಳಿ.
ಪುರುಷರಲ್ಲಿ ಫರ್ಟಿಲಿಟಿ ಸಮಸ್ಯೆ:-
ಲ್ಯಾಪ್ ಟಾಪ್ ಗಳನ್ನು ತಮ್ಮ ತೊಡೆಯ ಮೇಲೆ ಹಿಡಿದುಕೊಂಡು ಕೆಲಸ ಮಾಡುವ ಅಭ್ಯಾಸವು ಪುರುಷರಲ್ಲಿ ಊಹಿಸಬಹುದಾದ ಇನ್ಫರ್ಟಿಲಿಟಿ ಸಮಸ್ಯೆಗಳನ್ನು ಸೃಷ್ಟಿಸಬಹುದು. ಇದು ಪುರುಷರ ನ್ಯೂರೋಡಾಕ್ಟ್ ಅಂಗದ ಮೇಲೆ ಪರಿಣಾಮ ಬೀರುತ್ತದೆ, ಇದು ಅವರ ವೀರ್ಯಾಣುಗಳ ಸಂಖ್ಯೆ ಕಡಿಮೆ ಮಾಡುತ್ತದೆ.
ಇದಲ್ಲದೆ, ನಿಮ್ಮ ತೊಡೆಯ ಮೇಲೆ ಲ್ಯಾಪ್ ಟಾಪ್ ನೊಂದಿಗೆ ದೀರ್ಘಕಾಲದವರೆಗೆ ಕೆಲಸ ಮಾಡುವುದರಿಂದ ಪಾದಗಳ ಚರ್ಮವು ವಿವರ್ಣಗೊಳ್ಳುತ್ತದೆ ಮತ್ತು ಚರ್ಮದ ಕ್ಯಾನ್ಸರ್ ಉಂಟಾಗುವ ಅಪಾಯವನ್ನು ಉಂಟುಮಾಡುತ್ತದೆ ಎಂದು ಕೆಲವು ಅಧ್ಯಯನಗಳು ಬಹಿರಂಗಪಡಿಸಿವೆ.
ಪುರುಷರಿಗೆ ಹೆಚ್ಚು ಅಪಾಯಕಾರಿ
ಲ್ಯಾಪ್ಟಾಪ್ ಪುರುಷರಿಗೆ ಮಹಿಳೆಯರಿಗಿಂತ ಹೆಚ್ಚು ಹಾನಿಕರ. ಏಕೆಂದರೆ ಮಹಿಳೆಯರಲ್ಲಿ ಗರ್ಭಾಶಯವು ದೇಹದ ಒಳಗೆ ಇರುತ್ತದೆ. ಪುರುಷರ ಜನನಾಂಗ ಹೊರಗಡೆ ಇರುವುದರಿಂದ ಶಾಖ ವಿಕಿರಣವು ನೇರವಾಗಿ ಪುರುಷರ ಅಂಗಗಳ ಮೇಲೆ ಪರಿಣಾಮ ಬೀರುತ್ತದೆ.
ತಜ್ಞರ ಪ್ರಕಾರ, ತೊಡೆಯ ಮೇಲೆ ಲ್ಯಾಪ್ ಟಾಪ್ ಅನ್ನು ಇಟ್ಟುಕೊಂಡು ದೀರ್ಘಕಾಲದವರೆಗೆ ಕುಳಿತುಕೊಳ್ಳುವುದು ವೃಷಣಗಳ ತಾಪಮಾನವನ್ನು ಹೆಚ್ಚಿಸುತ್ತದೆ. ಏಕೆಂದರೆ ಲ್ಯಾಪ್ ಟಾಪ್ ಬೆಳಕಿನ ಕಂಪನಗಳನ್ನು ಸೃಷ್ಟಿಸುತ್ತದೆ, ಅದು ಫಲವತ್ತತೆ ಸಮಸ್ಯೆಗಳನ್ನು ಉಂಟುಮಾಡಬಹುದು. ಆದ್ದರಿಂದ, ಲ್ಯಾಪ್ ಟಾಪ್ ಅನ್ನು ಮೇಜಿನ ಮೇಲೆ ಇರಿಸಿ ಅದನ್ನು ಉಪಯೋಗಿಸುವುದು ಯಾವಾಗಲೂ ಒಳ್ಳೆಯದು ಎನ್ನುತ್ತಾರೆ.