ಬೆಂಗಳೂರು: ಮಾಜಿ ಮುಖ್ಯಮಂತ್ರಿಗಳು,ಹಿರಿಯ ಮುತ್ಸದ್ದಿ,ನಾಡು ಕಂಡ ಶ್ರೇಷ್ಠ ರಾಜಕಾರಣಿ,ಬೆಂಗಳೂರು ವಿಶ್ವವಿದ್ಯಾಲಯದ ಹೆಮ್ಮೆಯ ಹಿರಿಯ ವಿದ್ಯಾರ್ಥಿ ಶ್ರೀ ಎಸ್. ಎಂ ಕೃಷ್ಣ ಅವರ ಅಗಲಿಕೆಗೆ ಬೆಂಗಳೂರು ವಿಶ್ವವಿದ್ಯಾಲಯ ವತಿಯಿಂದ ಮೌನಚರಣೆ ಆಚರಿಸಿ ಸಂತಾಪ ಸೂಚಿಸಲಾಯಿತು.
Mutual Fund: ಈ ಮ್ಯೂಚುವಲ್ ಫಂಡ್ʼನಲ್ಲಿ ದಿನಕ್ಕೆ ಜಸ್ಟ್ 50 ರೂಪಾಯಿ ಹೂಡಿಕೆ ಮಾಡಿ 30 ಲಕ್ಷ ಗಳಿಸಿ.!
ಶ್ರೀ ಎಸ್.ಎಂ ಕೃಷ್ಣ ಅವರ ಭಾವಚಿತ್ರಕ್ಕೆ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಜಯಕರ ಎಸ್.ಎಂ, ಕುಲಸಚಿವರು ಶೇಕ್ ಲತೀಫ್ ಕೆ.ಎ.ಎಸ್, ಸಾಂಸ್ಕೃತಿಕ ಚಿಂತಕರು ಡಾ.ಬಂಜಗೆರೆ ಜಯಪ್ರಕಾಶ್,ಹಿಂದುಳಿದ ವರ್ಗಗಳ ಕೋಶಾಧಿಕಾರಿ ಪ್ರೊ.ಕೆ.ಚಿತ್ತಯ್ಯ ಪೂಜಾರ್ ಪುಷ್ಪ ನಮನ ಸಲ್ಲಿಸಿ ಗೌರವ ಸಮರ್ಪಿಸಿದರು.