ಬೆಂಗಳೂರು: SM ಕೃಷ್ಣ ಅಗಲಿಕೆಯಿಂದ ನನಗೆ ಹಿರಿಯ ಸಹೋದರನನ್ನು ಕಳೆದುಕೊಂಡಂತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಸದಾಶಿವನಗರದಲ್ಲಿರುವ ಎಸ್.ಎಂ ಕೃಷ್ಣ ಅವರ ನಿವಾಸದ ಬಳಿ ಅಂತಿಮ ದರ್ಶನ ಪಡೆದು ಮಾತನಾಡಿದ ಅವರು, ಎಸ್.ಎಂ.ಕೃಷ್ಣ ಅವರು ನಮ್ಮನ್ನ ಅಗಲಿದ ಸುದ್ದಿ ಅತ್ಯಂತ ದುಖಃ ತಂದಿದೆ. ಹಿರಿಯ ಚೇತನಕ್ಕೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುತ್ತೇನೆ.
Mutual Fund: ಈ ಮ್ಯೂಚುವಲ್ ಫಂಡ್ʼನಲ್ಲಿ ದಿನಕ್ಕೆ ಜಸ್ಟ್ 50 ರೂಪಾಯಿ ಹೂಡಿಕೆ ಮಾಡಿ 30 ಲಕ್ಷ ಗಳಿಸಿ.!
ಎಸ್.ಎಂ. ಕೃಷ್ಣ ಅವರು ರಾಷ್ಟ್ರ ಹಾಗೂ ರಾಜ್ಯದ ಅಭಿವೃದ್ಧಿಗೆ ಸಾಕಷ್ಟು ಶ್ರಮಪಟ್ಟಿದ್ದಾರೆ. ನಮ್ಮ ನಡುವೆ ಭಿನ್ನ ರಾಜಕೀಯ ನಿಲುವು ಇದ್ದಾಗಲೂ ಸಹ ದಶಕಗಳ ಕಾಲ ಅವರ ಜೊತೆಗಿನ ರಾಜಕೀಯ ಒಡನಾಟ ಮರೆಯಲು ಸಾಧ್ಯವಿಲ್ಲ. ಬಿಜೆಪಿಗೆ ಸೇರ್ಪಡೆಗೊಂಡ ಬಳಿಕ ಪ್ರೀತಿಯಿಂದ ಸಾಕಷ್ಟು ಸಲಹೆಗಳನ್ನ ನೀಡುತ್ತಿದ್ದರು. ನಮ್ಮ ನಾಡು ಓರ್ವ ಶ್ರೇಷ್ಠ ರಾಜಕಾರಣಿ, ಮುತ್ಸದ್ಧಿ ನಾಯಕನನ್ನು ಕಳೆದುಕೊಂಡಿದೆ ಎಂದು ಹೇಳಿದ್ದಾರೆ.